ಗುರುವಾರ , ಸೆಪ್ಟೆಂಬರ್ 19, 2019
29 °C

ಯುವ ಕಾಂಗ್ರೆಸ್ ಚುನಾವಣೆ: ವೇಳಾಪಟ್ಟಿ ಪ್ರಕಟ

Published:
Updated:

ಬೆಂಗಳೂರು: ಭಾರತ ಯುವ ಕಾಂಗ್ರೆಸ್‌ನ ಸದಸ್ಯತ್ವ ಅಭಿಯಾನ ಪೂರ್ಣಗೊಂಡಿದ್ದು, ಬೂತ್ ಮಟ್ಟದ ಚುನಾವಣೆಗೆ ಇದೇ 11 ಮತ್ತು 12ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. 16ರಿಂದ 21ರವರೆಗೆ ಚುನಾವಣೆಗಳು ನಡೆಯಲಿವೆ.`ರಾಜ್ಯದ 18,951 ಬೂತ್‌ಗಳಿಗೆ ಚುನಾವಣೆಗಳು ನಡೆಯಲಿವೆ. ಒಟ್ಟು 4,58,102 ಮಂದಿ ಸದಸ್ಯರು ಮತ ಚಲಾಯಿಸಲಿದ್ದಾರೆ~ ಎಂದು ಭಾರತ ಯುವ ಕಾಂಗ್ರೆಸ್‌ನ  ರಾಜ್ಯ ಚುನಾವಣಾಧಿಕಾರಿ ವಿ.ಕೆ. ಅರಿವಳಗನ್ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಚುನಾವಣಾ ವೇಳಾಪಟ್ಟಿ: ಇದೇ 11 ಮತ್ತು 12ರಂದು ನಾಮಪತ್ರಗಳ ಸಲ್ಲಿಕೆ. 13ರಂದು ನಾಮಪತ್ರಗಳ ಪರಿಶೀಲನೆ. 14ರಂದು ಚುನಾವಣಾ ಚಿಹ್ನೆ ನೀಡಿಕೆ. 15ರಂದು ಮತಗಟ್ಟೆಗಳ ಸಿದ್ಧತೆ. 16ರಿಂದ 21ರವರೆಗೆ ಮತದಾನ. 23ರಂದು ಚುನಾವಣೆಯ ಫಲಿತಾಂಶವನ್ನು ಐವೈಸಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದರು.

 

Post Comments (+)