ಭಾನುವಾರ, ಜೂನ್ 20, 2021
28 °C

ಯುವ ಕೃಷಿಕ ಪ್ರಶಸ್ತಿ ನೀಡಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಯುವ ಕೃಷಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಬ ರುವ ಕೃಷಿ ಮೇಳದಲ್ಲಿ `ಯುವ ಶ್ರೇಷ್ಠ ಕೃಷಿಕ~ ಹಾಗೂ `ಯುವ ಶ್ರೇಷ್ಠ ಕೃಷಿ ಮಹಿಳೆ~ ಪ್ರಶಸ್ತಿ ನೀಡಲು ನಿರ್ಧರಿಸ ಲಾಗಿದೆ” ಎಂದು  ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಆರ್.ಹಂಚಿನಾಳ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈವರೆಗೆ `ಶ್ರೇಷ್ಠ ಕೃಷಿಕ~ ಹಾಗೂ `ಶ್ರೇಷ್ಠ ಕೃಷಿ ಮಹಿಳೆ~ ಪ್ರಶಸ್ತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಯುವ ಕೃಷಿಕರಿಗೂ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದರು.ಕೃಷಿ ವಿವಿ ಮೂರು ಶೈಕ್ಷಣಿಕ ಆವರಣಗಳಲ್ಲಿರುವ ನಾಲ್ಕು ಮಹಾವಿ ದ್ಯಾಲಯಗಳಲ್ಲಿ ಬೋಧನಾ ಚಟು ವಟಿಕೆಗಳನ್ನು ಹೊಂದಿದೆ. 2009- 10ರಲ್ಲಿ 1137 ವಿದ್ಯಾರ್ಥಿಗಳು ಸ್ನಾತಕ ಪದವಿಗೆ, 510 ವಿದ್ಯಾರ್ಥಿ ಗಳು ಸ್ನಾತಕೋತ್ತರ  ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2009- 10ರಲ್ಲಿ 375 ಹಗೂ 215 ವಿದ್ಯಾರ್ಥಿ ಗಳು ಕ್ರಮವಾಗಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದರು.ಕೃಷಿ ವಿವಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ಸ್ನಾತಕೋತ್ತರ ವಿಭಾಗದ ಡೀನ್ ಡಾ.ಬಿ.ಎಂ.ಖಾದಿ ಅವರಿಗೆ ನಾಸ್ ಫೆಲೋಶಿಪ್ ಪ್ರಶಸ್ತಿ, ಡಾ.ಎನ್.ಜಿ.ಹನುಮರಟ್ಟಿ ಅವರಿಗೆ ಜವಾಹರ ಲಾಲ್ ನೆಹರು ಪ್ರಶಸ್ತಿ ದೊರೆತಿದೆ.ಅಂತರ್ಜಲ ನಿರ್ವಹಣೆಯಲ್ಲಿ ಕೈಕೊಂಡ ಸಂಶೋಧನೆಗೆ ಬೆಳವಟಗಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಅಂತ ರ್ಜಲ ವೃದ್ಧಿ ಪ್ರಶಸ್ತಿ ಲಭಿಸಿದೆ. ವಿಜಾಪುರದ ಅಖಿಲ ಭಾರತ ಹವಾ ಮಾನ ಸಂಶೋಧನಾ ಯೋಜನೆಗೆ ಸಮನ್ವಿತ ಯೋಜನೆಯ ಅತ್ಯುತ್ತಮ ಕೇಂದ್ರವೆಂದು ಗುರುತಿಸಿ ಗೌರವಿಸ ಲಾಗಿದೆ ಎಂದು ವಿವರಿಸಿದರು.ಕಲಾಂ ಭೇಟಿ: ಕೃಷಿ ವಿವಿ ಸ್ಥಾಪನೆಗೆ ಶ್ರಮಿಸಿದ ಹಾಗೂ ನಿವೃತ್ತ ಪ್ರಾಚಾರ್ಯ ಎಸ್.ಡಬ್ಲ್ಯೂ. ಮೆಣಸಿನ ಕಾಯಿ ಅವರ ಜನ್ಮಶತ ಮಾನೋತ್ಸವ ಆಚರಿಸಲಾಗುತ್ತಿದ್ದು, ಮಾರ್ಚ್ 17 ರಂದು ಸಮಾರಂಭ ನಡೆಯಲಿದೆ. ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.ಕುಲಪತಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಎಂಟು ತಿಂಗಳಾಯಿತು. ಕೃಷಿ ವಿವಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೂಲಂಕ ಷವಾಗಿ ಪರಿಶೀಲಿಸಲಾಗಿದೆ. ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದು ಕಂಡುಬಂದಿದೆ. ಆದರೆ ಸರ್ಕಾರ ತನಿಖೆ ನಡೆಸಲಿದೆ ಎಂದು ಪ್ರಶ್ನೆಯೊಂದಕ್ಕೆ ಡಾ.ಹಂಚಿನಾಳ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.