ಸೋಮವಾರ, ಮೇ 23, 2022
30 °C

ಯುವ ಜನತಾದಳಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಜೆಡಿಎಸ್ ತಾಲ್ಲೂಕು ಘಟಕದ ಯುವ ಜನತಾದಳದ ಉಪಾಧ್ಯಕ್ಷರಾಗಿ ಎಸ್.ಪ್ರವೀಣ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್ ತಿಳಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷರ ಆಯ್ಕೆ ವಿಷಯ ತಿಳಿಸಿದ ಸತ್ಯಪ್ರಕಾಶ್ ಅವರು ತಾಲ್ಲೂಕು ಯುವ ಘಟಕ ವನ್ನು ಹೆಚ್ಚು ಕ್ರಿಯಾಶೀಲವಾಗಿ ಸಂಘಟಿಸುವ ಜವಾಬ್ದಾರಿ ಪ್ರವೀಣ್ ಅವರ ಮೇಲಿದೆ ಎಂದರು.ಶಾಸಕ ಡಾ.ಶ್ರೀನಿವಾಸಮೂರ್ತಿ, ಮುಖಂಡರಾದ ಕೇಶವಮೂರ್ತಿ, ಗಂಗಣ್ಣ, ಜಿ.ಪಂ. ಸದಸ್ಯ ಕಾಂತರಾಜು, ಪುರಸಭಾ ಸದಸ್ಯ ಎನ್.ಪಿ.ಹೇಮಂತ ಕುಮಾರ್, ಪಿಳ್ಳಪ್ಪ, ಎಂ.ಬಿ.ಟಿ. ರಾಮಕೃಷ್ಣಪ್ಪ, ಲಕ್ಷ್ಮೀ ನಾರಾಯಣ್ ಉಪಸ್ಥಿತರಿದ್ದು ಅಭಿನಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.