ಯುವ ಜನಾಂಗವನ್ನು ಮಾರಾಟ ಪ್ರತಿನಿಧಿಗಳನ್ನಾಗಿಸುವ ಎಫ್‌ಡಿಐ - ಜೇಟ್ಲಿ

7

ಯುವ ಜನಾಂಗವನ್ನು ಮಾರಾಟ ಪ್ರತಿನಿಧಿಗಳನ್ನಾಗಿಸುವ ಎಫ್‌ಡಿಐ - ಜೇಟ್ಲಿ

Published:
Updated:

ನವ ದೆಹಲಿ (ಐಎಎನ್‌ಎಸ್): ಬಹು ಬ್ರಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಅವಕಾಶ ಮಾಡಿಕೊಡುತ್ತಿರುವ ಕೇಂದ್ರದ ಕ್ರಮವನ್ನು ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಎಫ್‌ಡಿಐನಿಂದಾಗಿ ಮುಂದೊಮ್ಮೆ ಭಾರತವು `ಮಾರಾಟ ಪ್ರತಿನಿಧಿಗಳ ದೇಶ'ವಾಗಲಿದೆ ಎಂದು ಟೀಕಿಸಿದರು.ರಾಜ್ಯಸಭೆಯಲ್ಲಿ ಎಫ್‌ಡಿಐ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು ದೇಶದ ಉತ್ಪಾದನಾ ವಲಯವನ್ನು ಅಂತರ ರಾಷ್ಟ್ರೀಯ ಚಿಲ್ಲರೆ ಮಾರುಕಟ್ಟೆ ಸರಪಳಿಯು ಪ್ರವೇಶಿಸುವ ಮುನ್ನ ಅದನ್ನು ಸರಿಪಡಿಸಬೇಕಾಗಿದೆ. ಇಲ್ಲದೇ ಹೋದರೆ ದೇಶದ ಉತ್ಪಾದನಾ ಕ್ಷೇತ್ರವು ನಾಶ ಹೊಂದಲಿದ್ದು, ಇದರಿಂದಾಗಿ ಮುಂಬರುವ ಪೀಳಿಗೆಗೆ ಯಾವುದೇ ಚಿಕ್ಕ ಆಯ್ಕೆಗಳು ಉಳಿಯುವುದಿಲ್ಲ ಎಂದು ಅವರು ಹೇಳಿದರು.ಮೂಲಭೂತವಾಗಿ ಸ್ಥಳೀಯ ಉತ್ಪನ್ನಗಳನ್ನು ದೇಶಿಯ ಚಿಲ್ಲರೆ ಮಾರುಕಟ್ಟೆಗೆ ಮಾತ್ರ ಪೂರೈಸಬೇಕು ಹಾಗೂ ಅಂತರ ರಾಷ್ಟ್ರೀಯ ಚಿಲ್ಲರೆ ಮಾರಾಟಗಾರರಿಗೆ  ಅಂತರ ರಾಷ್ಟ್ರೀಯ ಮಟ್ಟದಲ್ಲೇ ಸರಕು ಪೂರೈಕೆಯಾಗಬೇಕು. ಇಲ್ಲದೇ ಹೋದರೆ ಅವರು ಅಗ್ಗದ ಮಾರುಕಟ್ಟೆಯಲ್ಲಿ ಖರೀದಿಗೆ ಮುಂದಾಗುತ್ತಾರೆ ಎಂದು ಹೇಳಿದರು.ನಮ್ಮ ಉತ್ಪಾದನಾ ಕ್ಷೇತ್ರದಲ್ಲಿ ಸುಧಾರಣೆ ತರದೇ ದೇಶಿ ಮಾರುಕಟ್ಟೆಯನ್ನು ವಿದೇಶಿ ಚಿಲ್ಲರೆ ಮಾರಾಟಗಾರರಿಗೆ ಮುಕ್ತಗೊಳಿಸಿದರೆ ಏನಾಗುತ್ತದೆ ? ಮೊದಲಿಗೆ ಅದರ ಪರಿಣಾಮ ಉತ್ಪಾದನಾ ವಲಯದ ಉದ್ಯೋಗಗಳ ಮೇಲೆ ಬೀರುತ್ತದೆ. ನಂತರ ದೇಶಿಯ ಉತ್ಪಾದನೆ ಸ್ಥಗೀತಗೊಳಿಸಬೇಕಾಗುತ್ತದೆ. ಮುಂದೊಮ್ಮೆ ನಾವು ಗ್ರಾಹಕರಾಗಿ ನಮ್ಮ ಮಕ್ಕಳು ಮಾರಾಟ ಪ್ರತಿನಿಧಿಗಳಾಗಬೇಕಾದ ಪ್ರಸಂಗ ಬರುತ್ತದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry