ಬುಧವಾರ, ಜನವರಿ 29, 2020
27 °C

ಯುವ ಪ್ರಶಸ್ತಿ: 28 ಸಾಧಕರು, 2 ಸಂಘಟನೆ ಹಿರಿಮೆ

ಮಂಜುನಾಥ ಹೆಬ್ಬಾರ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಯುವಜನೋತ್ಸವ ಉದ್ಘಾಟನಾ ಸಮಾರಂಭದಲ್ಲಿ 19 ರಾಜ್ಯಗಳ 28 ಮಂದಿಗೆ ಹಾಗೂ ಎರಡು ಸ್ವಯಂಸೇವಾ ಸಂಘಟನೆಗಳಿಗೆ 2010-11ನೇ ಸಾಲಿನ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸ್ವಯಂಸೇವಾ ಸಂಘಟನೆಗಳಾದ ಆಂಧ್ರಪ್ರದೇಶದ ಆಕ್ಷನ್ ರೂರಲ್ ಟೆಕ್ನಾಲಜಿ ಸಂಸ್ಥೆ ಹಾಗೂ ರಾಜಸ್ತಾನದ ನವಚಾರ್ ಸಂಸ್ಥಾನ್‌ಗೆ ರೂ. 2 ಲಕ್ಷ, ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಿ ಕೇಂದ್ರ ಸಚಿವ ಅಜಯ್ ಮಾಕನ್ ಗೌರವಿಸಿದರು. ಯುವ ಸಾಧಕರಿಗೆ ರೂ. 40 ಸಾವಿರ, ಫಲಕ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಆಂಧ್ರಪ್ರದೇಶ, ಹರಿಯಾಣದ ತಲಾ 3, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರಗಳ ತಲಾ ಇಬ್ಬರು ಯುವ ಪ್ರಶಸ್ತಿ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಉತ್ತರಾಖಂಡ್, ಮಣಿಪುರ, ಮೇಘಾಲಯ, ತ್ರಿಪುರ, ಪುದುಚೇರಿ, ಒಡಿಶಾ, ದೆಹಲಿ, ಗೋವಾ ಮತ್ತು ಗುಜರಾತ್ ರಾಜ್ಯಗಳ ತಲಾ ಒಬ್ಬರು ಪ್ರಶಸ್ತಿ ಸ್ವೀಕರಿಸಿದರು.ಪುರಸ್ಕೃತರು: ಕರ್ನಾಟಕದ ವೈ.ಚಿನ್ನಪ್ಪ, ಆಂಧ್ರಪ್ರದೇಶದ ಎಡುನುರಿ ಶಂಕರ್, ಎ.ವೆಂಕಟಲಕ್ಷ್ಮಿ, ಕೆ.ಎಚ್.ಭಗವಾನ್ ದಾಸ್ ಗೌತಮ್, ಅಸ್ಸಾಂನ ಬಿದ್ಯುತ್, ದಿವ್ಯಜ್ಯೋತಿ ದಾಸ್, ದೆಹಲಿಯ ಬಂಟಿ ಸೋಲಂಕಿ, ಗೋವಾದ ಕಾಜಲ್ ಸಿ.ಕರ್ಕೆರಾ, ಗುಜರಾತ್‌ನ ರಾಕಿ ದಿನೇಶ್‌ಚಂದ್ರ ಪಾಂಡ್ಯ, ಹರಿಯಾಣದ ಮುಸ್ಲಿಂ, ಸೀಮಾ ರಾಣಿ ಸುಭಾಷ್, ಜಮ್ಮು ಮತ್ತು ಕಾಶ್ಮೀರದ ವಿಜಯಕುಮಾರ್, ರಾಜಾ ಅಬ್ದುಲ್ ವಹೀದ್, ಕೇರಳದ ಬಾಬುರಾಜನ್, ಮಧ್ಯಪ್ರದೇಶದ ಸಂತೋಷ್ ತಿವಾರಿ,ಮಹಾರಾಷ್ಟ್ರದ ಅಮಿತ್ ಗಣಪತ್‌ಗೋರ್ಕೆ,ನಿಶಾ ವಿತೋಬಾ ಜಾದವ್, ಒರಿಸ್ಸಾದ ಜೋತ್ಸ್ನಾಮು, ರಾಜಸ್ತಾನದ ಗಿರಿರಾಜ್ ಕುಮಾರ್, ರಾಮ್‌ದಯಾಲ್ , ಉತ್ತರಾಖಂಡದ ಪ್ರದೀಪ್‌ಮಹರಾ, ಪಶ್ಚಿಮ ಬಂಗಾಳದ ರೂಪಾಲಿ ಬಿಸ್‌ವಾಸ್, ರಿಶಬಜೈನ್, ಮಣಿಪುರದ ರಾಜೇಂದ್ರ ಸಿಂಗ್, ಮೇಘಾಲಯದ  ಲ್ವಾರಿನಿಯಾಂಗ್, ತ್ರಿಪುರದ ಜೋಯ್‌ದೀಪ್, ಪುದುಚೇರಿಯ ಸಾದಿಶ್. ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಸಚಿವ ಅಜಯ್ ಮಾಕನ್ ಮಾತನಾಡಿ, `ಈ ಹಿಂದೆ 25 ಪ್ರಶಸ್ತಿ, ಈ ವರ್ಷ 30ಕ್ಕೆ ಏರಿಸಲಾಗಿದೆ~ ಎಂದರು.

 

ಪ್ರತಿಕ್ರಿಯಿಸಿ (+)