ಗುರುವಾರ , ಫೆಬ್ರವರಿ 25, 2021
19 °C

ಯುವ ಮನಸ್ಸುಗಳ `ಆರೋಹಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವ ಮನಸ್ಸುಗಳ `ಆರೋಹಿ'

ನೆರೆಭಾಷೆಗಳಲ್ಲಿ ಜನಪ್ರಿಯತೆ ಪಡೆದಂತೆ ಕನ್ನಡದಲ್ಲಿ ಮ್ಯೂಸಿಕ್ ವಿಡಿಯೊ ಆಲ್ಬಮ್‌ಗಳು ಜನರ ಗಮನ ಸೆಳೆದದ್ದು ಕಡಿಮೆ. ಮನೋಮೂರ್ತಿ, ಜಯಂತ ಕಾಯ್ಕಿಣಿ ಮತ್ತು ಸೋನು ನಿಗಮ್‌ರಂಥ ಖ್ಯಾತನಾಮರ ಕೂಸು `ನೀನೇ ಬರಿ ನೀನೇ' ಸಹ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ. ಆದರೂ ಆಗಾಗ್ಗೆ ಕನ್ನಡದಲ್ಲಿ ಇಂಥ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ತಾಜಾ ಸೇರ್ಪಡೆ `ಆರೋಹಿ'.ವಿವಿಧ ಕ್ಷೇತ್ರಗಳಲ್ಲಿರುವ ಉತ್ಸಾಹಿ ಯುವಕರ ತಂಡದ ಶ್ರಮ ಮತ್ತು ಸೃಜನಶೀಲತೆ `ಆರೋಹಿ'ಯ ರೂಪದಲ್ಲಿ ಹೊರಬರಲಿದೆ. `ಆರೋಹಿ'ಯಲ್ಲಿ ಒಂಬತ್ತು ಹಾಡುಗಳಿರಲಿವೆ. ಅವುಗಳಲ್ಲಿ ನಾಲ್ಕು ಹಾಡುಗಳು ದೃಶ್ಯರೂಪದಲ್ಲಿರುತ್ತವೆ. ಈ ಆಡಿಯೊ, ವಿಡಿಯೊ ಪ್ರಯತ್ನಕ್ಕೆ ಅಂದಾಜಿಸಿರುವ 35 ಲಕ್ಷ ರೂಪಾಯಿ ಬಂಡವಾಳವನ್ನು ಹೂಡುತ್ತಿರುವುದು ಸಿ.ಆರ್. ಚಂದ್ರಶೇಖರ್.ಮಂಜುನಾಥ್ ಕೆ. ರವಿನ್ `ಆರೋಹಿ'ಯ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇದರ ಪರಿಕಲ್ಪನೆ ಡಿಜೆ ಅಕ್ಷಯ್ ಅವರದು. ದೃಶ್ಯಗಳಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್  ಹೊಸೆದ ಮಟ್ಟುಗಳಿಗೆ ಮಂಜುನಾಥ್ ಮತ್ತು ಅರಸು ಅಂತಾರೆ ಸಾಹಿತ್ಯ ಹೊಸೆದಿದ್ದಾರೆ. ರನ್ನ ಎಂ.ವಿ. ಛಾಯಾಗ್ರಹಣ ಈ ವಿಡಿಯೊ ಆಲ್ಬಮ್‌ಗಿದೆ.ಆರ್‌ಜೆ ಮತ್ತು ಡಿಜೆಯಾಗಿರುವ ನಿರಂಜನ್ ದೇಶಪಾಂಡೆ, `ಗೊಂಬೆಗಳ ಲವ್' ನಾಯಕಿ ಪಾವನಿ, `ಛತ್ರಿಗಳು ಸಾರ್ ಛತ್ರಿಗಳು' ನಾಯಕಿ ಪವಿತ್ರಾ ಗೌಡ, ಸನಿಹ ರೆಡ್ಡಿ, ಶ್ರೀನಿಧಿ, ಗಿಲ್ ಸ್ಮಿತ್, ರಂಜಿತ್ ಮತ್ತಿತರರು `ಆರೋಹಿ'ಗಾಗಿ ಬಣ್ಣಹಚ್ಚಲಿದ್ದಾರೆ. ಸಕಲೇಶಪುರ, ಮೂಡಿಗೆರೆ ಸುತ್ತಮುತ್ತಲಿನ ರಮಣೀಯ ಸೊಬಗಿನ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಪ್ರೀತಿ, ಗೆಳೆತನ, ಸ್ತ್ರೀ ಸಂವೇದನೆ, ವಿರಹ, ಬದುಕಿನ ನೋವು ನಲಿವು ಈ ಆಲ್ಬಮ್ ಹಾಡುಗಳ ವಸ್ತುಗಳು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.