`ಯುವ ಸಂಘಟನೆಯಿಂದ ಅಭಿವೃದ್ಧಿ ಸಾಧ್ಯ'

7

`ಯುವ ಸಂಘಟನೆಯಿಂದ ಅಭಿವೃದ್ಧಿ ಸಾಧ್ಯ'

Published:
Updated:

ಸಾಗರ: ಯುವ ಸಂಘಟನೆಗಳು ಕ್ರಿಯಶೀಲವಾಗಿದ್ದಲ್ಲಿ ಯಾವುದೇ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ನೂರುಲ್ಲಾ ಹುದಾ ಮಸೀದಿಯ ಧರ್ಮಗುರು ಜನಾಬ್ ಸುಲೇಮಾನ್ ಮುಸ್ಲಿಯಾರ್ ಹೇಳಿದರು.

ಬದ್ರಿಯಾ ಶಾದಿ ಮಹಲ್‌ನಲ್ಲಿ  ಈಚೆಗೆ ಈಚೆಗೆ ಕಾರ್ಯಕ್ರಮದಲ್ಲಿ ಬ್ಯಾರಿ ಯೂತ್ ಫೆಡರೇಷನ್ ಸಂಘಟನೆ ಉದ್ಘಾಟಿಸಿ ಅವರು ಮಾತನಾಡಿದರು.ಬ್ಯಾರಿ ಯೂತ್ ಫೆಡರೇಷನ್‌ನ ಅಧ್ಯಕ್ಷ  ಹಮೀದ್ ಮಾತನಾಡಿ, ಬ್ಯಾರಿ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದ್ದು ಅದನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯಕ್ಕೆ ಸಂಘಟನೆ ತೊಡಗಲಿದೆ ಎಂದರು.ಇದೇ ಸಂದರ್ಭದಲ್ಲಿ 2012ನೇ ಸಾಲಿನಲ್ಲಿ ಹಜ್ ಯಾತ್ರೆಗೆ ಹೋಗಿ ಬಂದ ಗಣ್ಯರಾದ ಶಬ್ಬೀರ್ ಸಾಬ್, ಅಮೀರ್‌ಜಾನ್, ಅಬ್ದುಲ್ ಸಾಬ್, ಅನ್ಸಾರ್ ಸಾಬ್, ಬದ್ರಕಾ ಅವರನ್ನು ಸನ್ಮಾನಿಸಲಾಯಿತು. ಉರ್ದು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಪುರಸ್ಕರಿಸಲಾಯಿತು.ಮದರಸಾ ಹಯಾತುಲ್ ಇಸ್ಲಾಂನ ಮಹಮದ್ ಹನೀಫ್ ಮದನಿ ಉಸ್ತಾದ್, ಬದ್ರಿಯಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಮೊಯಿದ್ದೀನ್ ಗಂಗೊಳ್ಳಿ, ನಗರಸಭಾ ಸದಸ್ಯ ಟಿಪ್‌ಟಾಪ್ ತಸ್ರೀಫ್, ಮಾಜಿ ಸದಸ್ಯ ಮಹಮದ್ ಖಾಸಿಂ, ಬದ್ರಿಯಾ ಮಸೀದಿ ಅಧ್ಯಕ್ಷ ಮುನಾವರ್ ಸಾಬ್, ಅನ್ವರ್, ನಿಸಾರ್ ಅಹಮದ್ ಕುಂಜಾಲಿ, ಸಲಾಂ, ಅನೀಸ್, ಮುಸ್ತಫಾ ಬಾಷಾ ಹಾಜರಿದ್ದರು.ಆಶೀಕ್ ಪ್ರಾರ್ಥಿಸಿದರು. ಯೂಸೂಫ್ ಸ್ವಾಗತಿಸಿದರು. ನಾಸೀರ್ ಪ್ರಾಸ್ತಾವಿಕ ಮಾತನಾಡಿದರು. ಇಮ್ರಾನ್ ವಂದಿಸಿದರು. ಅನ್ವರ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry