ಮಂಗಳವಾರ, ಜೂನ್ 22, 2021
27 °C

ಯುವ ಸಮುದಾಯ ದೇಶದ ಬೆನ್ನೆಲುಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವಿದ್ಯಾರ್ಥಿ ಮತ್ತು ಯುವ ಸಮುದಾಯಗಳು ಈ ದೇಶದ ಬೆನ್ನೆಲುಬು. ಸಮಾಜದ ಪರಿವರ್ತನೆ ಮತ್ತು ಸುಧಾರಣೆಗಳಿಗೆ ಅವರು ಶ್ರಮಿಸಬೇಕು ಎಂದು ಶಾಸಕ ವಿ. ಶ್ರೀನಿವಾಸಪ್ರಸಾದ್ ಹೇಳಿದರು.ವಿಶ್ವಮಾನವ ಯುವ ವೇದಿಕೆಯ ಆಶ್ರಯದಲ್ಲಿ ಬುಧವಾರ ಆಯೋಜಿಸ ಲಾಗಿದ್ದ ವಿದ್ಯಾರ್ಥಿ- ನಾಯಕತ್ವ ಸಮೀಕರಣ ಕುರಿತು ಕಾರ್ಯಾಗಾರ ಉದ್ಘಾಟಿಸಿದ ಮಾತನಾಡಿದರು.`ನಮ್ಮ ದೇಶದ ಸಂಸ್ಕೃತಿ ದೊಡ್ಡದು. ತತ್ವಜ್ಞಾನಿಗಳು, ವಿಚಾರವಾದಿಗಳು, ಧಾರ್ಮಿಕ ನಾಯಕರು, ವಿಜ್ಞಾನಿಗಳು, ದಾರ್ಶನಿಕರು ಬಾಳಿದ ದೇಶ ಇದು. ಅವರ ಆದರ್ಶಗಳು ಇವತ್ತಿಗೂ ವಿಶ್ವಮಾನ್ಯ. ಬುದ್ಧ, ವಿವೇಕಾನಂದ, ಡಾ. ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರು, ಸುಭಾಷ್‌ಚಂದ್ರ ಬೋಸ್‌ರಂತಹ ಅನೇಕರು ಮಹಾನ್ ನಾಯಕರು. ಅವರಂತಹ ನಾಯಕರು ಈಗಿನ ಯುವ ಸಮುದಾಯದಲ್ಲಿ ಹುಟ್ಟಿ ಬರಬೇಕು~ ಎಂದು ಹೇಳಿದರು.`ಮಹಾತ್ಮಾ ಗಾಂಧೀಜಿಯವರ ಅಹಿಂಸಾ ತತ್ವವು ಈ ದೇಶಕ್ಕೆ ಸಿಕ್ಕ ಬಹುದೊಡ್ಡ ಕಾಣಿಕೆ. ದೇಶವು ಸಂಪನ್ಮೂಲ ಭರಿತವಾಗಿದೆ. ಜಾತಿ, ಧರ್ಮ, ಮಾನವಿಯತೆಗಳ ವೈವಿಧ್ಯತೆ ಯಿರುವ ದೇಶ ಇದು. ಇದೆಲ್ಲದರ ನಡುವೆಯೂ ಅಭಿವೃದ್ಧಿಶೀಲ ದೇಶವಾಗಿ ಹೊರಹೊಮ್ಮಿದೆ. ಜಾತಿ, ಧರ್ಮ, ಭಾಷೆಗಳ ಅಡೆತಡೆಗಳನ್ನು ಬದಿಗಿಟ್ಟು ದೇಶದ ಅಭಿವೃದ್ಧಿಗಾಗಿ ಚಿಂತನೆ ನಡೆಯಬೇಕು~ ಎಂದರು.ಕಾರ್ಯಕ್ರಮದ ಅತಿಥಿ ಬೆಂಗಳೂರಿನ ವೆನೆಸಿಯಾ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ. ಸಿ. ಜಯಣ್ಣ, `ಬಡತನ, ಜಾತಿ, ಧರ್ಮಗಳ ಕಟ್ಟಳೆಗಳನ್ನು ಮೀರಿ ಬೆಳೆಯಬೇಕು. ನಿಮ್ಮ ಸುತ್ತ ನೀವೇ ಬೇಲಿ ನಿರ್ಮಿಸಿಕೊಳ್ಳಬಾರದು. ಅವು ಗಳನ್ನು ಮೀರಿ ಬೆಳೆಯಬೇಕು. ಚಿಂತನೆ, ಮನಸ್ಸುಗಳಿಗೆ ಬಡತನ ಅಥವಾ ಮುಪ್ಪು ಇಲ್ಲ. ಆದ್ದರಿಂದ ಯುವ ಜನತೆಯು ನಾಯಕರಾಗಿ ಬೆಳೆಯ ಬೇಕು~ ಎಂದು ಹೇಳಿದರು.`ಎಲ್ಲದಕ್ಕೂ ಜಾತಿ, ದುಡ್ಡಿನ ಬಲ ಬೇಕಿಲ್ಲ. ಪರರೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದನ್ನು ಬಿಟ್ಟು ಹೊರ ಬಂದಾಗ ಮಾತ್ರ ನಮ್ಮ ಅಭಿ ವೃದ್ಧಿ ಹಾಗೂ ನಮ್ಮ ನಾಯಕತ್ವ ಗುಣ ಗಳು ಬೆಳಕಿಗೆ ಬರುತ್ತವೆ~ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ವೆಂಕೋಬರಾವ್ ವಹಿಸಿದ್ದರು. ಕೆ.ಆರ್. ಪೇಟೆ ಕಲ್ಪತರು ಪ್ರಥಮ ದರ್ಜೆ ಕಾಲೇಜು ಅಧ್ಯಕ್ಷ ಜಯರಾಂ ವಿಠ್ಠಲಪುರ, ಉಪನ್ಯಾಸಕಿ ಮಧೂರಾಣಿ ಗೌಡ, ವೇದಿಕೆ ಅಧ್ಯಕ್ಷ ಎಂ.ಜೆ. ಸುರೇಶಗೌಡ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.