ಭಾನುವಾರ, ಏಪ್ರಿಲ್ 18, 2021
23 °C

ಯೂಟ್ಯೂಬ್ ಜನಪ್ರಿಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಟರ್‌ನೆಟ್‌ನ ಅತಿದೊಡ್ಡ ಮಾಹಿತಿ ಶೋಧ ತಾಣವಾಗಿರುವ ಗೂಗಲ್ ಇಂಕ್ ಮಾಲೀಕತ್ವದ, ವಿಡಿಯೊಗಳನ್ನು ಹಂಚಿಕೊಳ್ಳುವ ಯೂಟ್ಯೂಬ್ ತಾಣದಲ್ಲಿ ಪ್ರತಿ ನಿಮಿಷಕ್ಕೆ 36 ಗಂಟೆಗಳಷ್ಟು ವಿಡಿಯೊಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. 1960ರಿಂದೀಚೆಗಿನ ನೂರಾರು ಜನಪ್ರಿಯ ಚಲನಚಿತ್ರಗಳೂ ಈ ತಾಣದಲ್ಲಿ ವೀಕ್ಷಣೆಗೆ ಲಭ್ಯ ಇವೆ.  ಬಾಲಿವುಡ್‌ನ ಇತ್ತೀಚೆಗಿನ ಭಾರಿ ಜನಪ್ರಿಯ ಚಿತ್ರ ‘ದಬಾಂಗ್’ ಕೂಡ ಇಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯ ಇದೆ.ಬರೀ ಚಲನಚಿತ್ರಗಳಷ್ಟೇ ಅಲ್ಲದೇ ಜನಪ್ರಿಯ ಟೆಲಿವಿಷನ್ ಕಾರ್ಯಕ್ರಮಗಳನ್ನೂ ಇಲ್ಲಿ ವೀಕ್ಷಿಸಬಹುದು.ಈ ತಾಣದಲ್ಲಿ ಪ್ರತಿ ದಿನ ಸೇರ್ಪಡೆಯಾಗುವ  ಮಾಹಿತಿಯು ಅಗಾಧ ಪ್ರಮಾಣದಲ್ಲಿ ಇದೆ. ಕಳೆದ ವರ್ಷ ಇಲ್ಲಿ 8 ಲಕ್ಷ ಪೇಟಾಬೈಟ್ಸ್ (ಛಿಠಿಚಿಠಿಛಿ)

ಮಾಹಿತಿ ಒದಗಿಸಲಾಗಿತ್ತು.  ಒಂದು ಪೇಟಾಬೈಟ್ ಅಂದರೆ ಒಂದು ಲಕ್ಷ ಗೀಗಾಬೈಟ್ಸ್‌ಗಳಾಗಿವೆ. ಈ ಅಗಾಧ ಪ್ರಮಾಣದ ಮಾಹಿತಿ ಸಂಗ್ರಹಿಸಲು 75 ಶತಕೋಟಿಗಳಷ್ಟು ಐಪಾಡ್‌ಗಳು ಬೇಕಾಗುತ್ತವೆ.  ಪ್ರತಿ ದಿನ 50 ಕೋಟಿಗಳಷ್ಟು ಜನರು ವಿವಿಧ ಸಾಮಾಜಿಕ ತಾಣಗಳಿಗೆ ಭೇಟಿ ನೀಡುತ್ತಾರೆ. 100 ಶತಕೋಟಿಗಳಷ್ಟು ಅನಪೇಕ್ಷಿತವಲ್ಲದ ಇ-ಮೇಲ್‌ಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತವೆ.ಸುಳ್ಳು ಹೇಳಲು ವೇದಿಕೆ

ಜನಪ್ರಿಯ ಸಾಮಾಜಿಕ ಸಂಪರ್ಕ ತಾಣಗಳಾಗಿರುವ ‘ಫೇಸ್‌ಬುಕ್’, ಟ್ವಿಟ್ಟರ್ ಮುಂತಾದವುಗಳಲ್ಲಿ ಜನರು ಸುಳ್ಳಿನ ಮಾಹಿತಿಯನ್ನೇ ಹೆಚ್ಚಾಗಿ ಪೋಣಿಸಿರುತ್ತಾರೆ. ಮುಖಾಮುಖಿಯಾದ ಸಂದರ್ಭದಲ್ಲಿ ಸುಳ್ಳು ಹೇಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಇಂತಹ ತಾಣಗಳಲ್ಲಿ ಸತ್ಯಕ್ಕಿಂತ ಸುಳ್ಳಿಗೆ ಹೆಚ್ಚು ಪ್ರಾಧಾನ್ಯ ನೀಡುತ್ತಾರೆ.  ಇತರರ ಮೇಲೆ ಹೆಚ್ಚು ವಿಶ್ವಾಸ ಇಡಲಾರದ ಸ್ವಭಾವವನ್ನು ಇದು ಸೂಚಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.     

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.