ಶುಕ್ರವಾರ, ಏಪ್ರಿಲ್ 23, 2021
22 °C

ಯೂನಸ್ ವಜಾ ಆದೇಶ, ಸುಪ್ರೀಂ ಕೋರ್ಟ್‌ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಢಾಕಾ (ಐಎಎನ್‌ಎಸ್):  ತಮ್ಮನ್ನು ಗ್ರಾಮೀಣ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದಿಂದ ವಜಾ ಮಾಡಿದ್ದ ಆದೇಶವನ್ನು ಪುರಸ್ಕರಿಸಿದ ಹೈಕೊರ್ಟ್ ನ ತೀರ್ಪನ್ನು ಪ್ರಶ್ನಿಸಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರು  ಸಲ್ಲಿಸಿದ್ದ  ಮೇಲ್ಮನವಿ   ಅರ್ಜಿಯನ್ನು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೋಳಿಸಿದೆ.  ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಬಿ.ಎಂ ಕೈರುಲ್ ಹಕ್ ನೇತೃತ್ವದ ಏಳ ಜನ ಸದಸ್ಯರನ್ನು ಒಳಗೊಂಡ ಸುಪ್ರೀಂ ಕೋರ್ಟ್ ನ  ವಿಭಾಗೀಯ ಪೀಠವು ಹೈಕೊರ್ಟ್  ತೀರ್ಪನ್ನು ಎತ್ತಿಹಿಡಿದು, ಅರ್ಜಿಯನ್ನು ತಳ್ಳಿಹಾಕಿದೆ.

 

ದೇಶದ ಬ್ಯಾಂಕಿಂಗ್ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಯೂನಸ್ ಅವರನ್ನು ಮಾರ್ಚ್ 2 ರಂದು ವಜಾಗೊಳಿಸಿ ಬ್ಲಾಂಗಾದೇಶ ಕೇಂದ್ರ ಬ್ಯಾಂಕ್ ಆದೇಶ ಹೊರಡಿಸಿತ್ತು. ನಂತರ ಆ ಆದೇಶವನ್ನು ಹೈಕೊರ್ಟ್ ಸಹ ಎತ್ತಿಹಿಡಿದಿತ್ತು.

 

 

 

.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.