ಬುಧವಾರ, ಏಪ್ರಿಲ್ 21, 2021
31 °C

ಯೂರೋಪ್‌ಗಿಂತ ಏಷ್ಯಾ ಮುಂದೆ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಲಂಡನ್ ಒಲಿಂಪಿಕ್ ಕೂಟದಲ್ಲಿ ಯೂರೋಪ್‌ನವರಿಗಿಂತ ಏಷ್ಯಾದವರು ಮುಂದಿದ್ದಾರೆ.

ಈವರೆಗೆ ನಡೆದಿರುವ ಸ್ಪರ್ಧೆಗಳಲ್ಲಿ ಯೂರೋಪ್ ದೇಶಗಳ ಕ್ರೀಡಾಪಟುಗಳು ಗಮನ ಸೆಳೆಯುವಂಥ ಪ್ರದರ್ಶನ ನೀಡಿಲ್ಲ. ಚೀನಾ ಸೇರಿದಂತೆ ಏಷ್ಯಾದ ಅನೇಕ ರಾಷ್ಟ್ರಗಳು ಪದಕ ಗೆಲ್ಲುವಲ್ಲಿ ಪ್ರಾಬಲ್ಯ ಮೆರೆದಿದ್ದಾರೆ.ಏಷ್ಯಾದ ಪ್ರಬಲ ಕ್ರೀಡಾ ಶಕ್ತಿ ಎನಿಸಿರುವ ಚೀನಾ ಹದಿನೇಳು ಸ್ವರ್ಣ, ಒಂಬತ್ತು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ವಿಶೇಷವೆಂದರೆ ಸ್ವರ್ಣ ಪದಕ ಪಟ್ಟಿಯಲ್ಲಿ ಚೀನಾ ಎಲ್ಲರಿಗಿಂತ ಮೇಲಿದೆ. ಉತ್ತರ ಹಾಗೂ ದಕ್ಷಿಣ ಕೊರಿಯಾ ದೇಶದವರೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.