ಗುರುವಾರ , ಏಪ್ರಿಲ್ 15, 2021
23 °C

ಯೂರೋಪ್ ಪ್ರವಾಸ ಶೇ10 ರಿಯಾಯಿತಿ: ಟ್ರಫಾಲ್ಗರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಾಲರ್ ಎದುರು `ಯೂರೋ' ಮೌಲ್ಯ ಶೇ 13ರಷ್ಟು ಕುಸಿದಿರುವುದರಿಂದ ಯೂರೋಪ್ ಖಂಡದ ದೇಶಗಳಿಗೆ ಪ್ರವಾಸ ಕೈಗೊಳ್ಳಲು ಸಕಾಲ ಎಂದು ಪ್ರವಾಸ ಆಯೋಜನೆ ಸಂಸ್ಥೆ `ಟ್ರಫಾಲ್ಗರ್'ನ ಏಷ್ಯಾ ಪ್ರಾದೇಶಿಕ ನಿರ್ದೇಶಕ ನಿಕೊಲಸ್ ಲಿಮ್ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈನಲ್ಲಿ ಇತ್ತೀಚೆಗೆ ಕಂಪೆನಿ ಕಚೇರಿ ತೆರೆದಿದೆ. 2013ರ ಜ. 31ರವರೆಗೆ ಶೇ 10 ರಿಯಾಯಿತಿ ದರದಲ್ಲಿ ಯೂರೋಪ್ ಪ್ರವಾಸ ಆಯೋಜಿಸಲಾಗುತ್ತಿದೆ. ಮಾಹಿತಿಗೆ www.trafalgar.com ವೀಕ್ಷಿಸಬಹುದು ಎಂದರು.

ಕಳೆದ ವರ್ಷ 50 ಸಾವಿರ ಭಾರತೀಯ ಪ್ರವಾಸಿಗರು ಯೂರೋಪ್‌ಗೆ ಭೇಟಿ ನೀಡಿದ್ದು, ವಾರ್ಷಿಕ ಶೇ 20ರಷ್ಟು ಹೆಚ್ಚಳವಾಗುತ್ತಿದೆ ಎಂದು ಸಂಸ್ಥೆಯ ಭಾರತದಲ್ಲಿನ ವ್ಯವಸ್ಥಾಪಕ ದರ್ಶನ್ ಮಹೇಶ್ವರಿ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.