ಯೂರೋಪ್ ಬಿಕ್ಕಟ್ಟಿಗೆ ಕಿಮ್ ಆತಂಕ

ಶುಕ್ರವಾರ, ಜೂಲೈ 19, 2019
24 °C

ಯೂರೋಪ್ ಬಿಕ್ಕಟ್ಟಿಗೆ ಕಿಮ್ ಆತಂಕ

Published:
Updated:

ವಾಷಿಂಗ್ಟನ್ (ಎಎಫ್‌ಪಿ): `ಯೂರೋಪ್ ಸಾಲದ ಬಿಕ್ಕಟ್ಟು ಜಾಗತಿಕ ಅರ್ಥ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ~ ಎಂದು ವಿಶ್ವ ಬ್ಯಾಂಕ್‌ನ ನೂತನ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಎಚ್ಚರಿಕೆ ನೀಡಿದ್ದಾರೆ.ವಿಶ್ವ ಬ್ಯಾಂಕ್ 12ನೇ ಅಧ್ಯಕ್ಷರಾಗಿ ಜುಲೈ 1ರಂದು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಕಿಮ್ ಜಾಗತಿಕ ಅರ್ಥ ವ್ಯವಸ್ಥೆ ಕುರಿತು ಅವರು ಆತಂಕ ವ್ಯಕ್ತಪಡಿಸಿದರು.`ಯೂರೋಪ್ ಒಕ್ಕೂಟದ ದೇಶಗಳು ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ತುರ್ತು ಮತ್ತು ಸುಸ್ಥಿರ ಕ್ರಮಗಳನ್ನು ಕೈಗೊಳ್ಳಬೇಕಿದೆ~ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.`ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಉತ್ತಮ ವೃದ್ಧಿ ದರ ಕಾಯ್ದುಕೊಳ್ಳಲು ಅಗತ್ಯ ನೆರವು ನೀಡುವುದು ವಿಶ್ವಬ್ಯಾಂಕ್‌ನ ಮೊದಲ ಆದ್ಯತೆ. ವಿಶ್ವ ಅರ್ಥ ವ್ಯವಸ್ಥೆ ಸದೃಢವಾಗಿದ್ದರೆ ಅದರ ಫಲಗಳು ಎಲ್ಲಾ ದೇಶಗಳಿಗೂ ಲಭಿಸುತ್ತವೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry