ಯೆಮನ್: ಸೌದಿಗೆ ತೆರಳಿದ ಗಾಯಾಳು ಅಧ್ಯಕ್ಷ

ಶನಿವಾರ, ಜೂಲೈ 20, 2019
23 °C

ಯೆಮನ್: ಸೌದಿಗೆ ತೆರಳಿದ ಗಾಯಾಳು ಅಧ್ಯಕ್ಷ

Published:
Updated:

ಸನಾ (ಯೆಮನ್/ಎಪಿ): ಬಂಡುಕೋರರ ಬಾಂಬ್ ದಾಳಿಯಿಂದ ಗಾಯಗೊಂಡಿರುವ ಯೆಮನ್‌ನ ಅಧ್ಯಕ್ಷ ಅಲಿ ಅಬ್ದುಲ್ಲ ಸಲೇಹ್  ಆಹ್ವಾನದ ಮೇರೆಗೆ ಚಿಕಿತ್ಸೆಗಾಗಿ ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಅರಮನೆ ಮೂಲಗಳು ತಿಳಿಸಿವೆ. ಆದರೆ ಅವರು ದೇಶದಿಂದ ತೆರಳಿದರಾದರೂ ಸೌದಿಯಲ್ಲಿ ಬಂದಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ.33 ವರ್ಷಗಳ ಸುದೀರ್ಘಾವಧಿಯ ಆಡಳಿತದಿಂದ ಕೆಳಗಿಳಿಯುವಂತೆ ಆಗ್ರಹಿಸಿ ನಾಗರಿಕರು ನಡೆಸುತ್ತಿರುವ ದಂಗೆ ತೀವ್ರ ಗೊಂಡಿದ್ದರಿಂದ, ಸಲೇಹ್ ಮತ್ತೆ ಯೆಮನ್‌ಗೆ ಮರಳುವುದಿಲ್ಲ ಎಂಬ ದಟ್ಟವಾದ ವದಂತಿ ಹಬ್ಬಿದೆ.

 

`ಸಲೇಹ್ ಕುಟುಂಬ ಸಮೇತ ರಿಯಾದ್‌ಗೆ ಆಗಮಿಸಿದ್ದು, ಅಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯಲಿದ್ದಾರೆ.ನಂತರ ಅವರು ಯೆಮನ್‌ಗೆ ಮರಳುವರು~ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಸಲೇಹ್ ದೇಶದಿಂದ ಹೊರ ಹೋದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ವಿರೋಧಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದರು. `ಇಂದು ಯೆಮನ್ ಪುನರ್ಜನ್ಮ ಪಡೆದಿದೆ~ ಎಂದು ರಾಜಧಾನಿಯಲ್ಲಿ ಚಳವಳಿಯ ಕೇಂದ್ರ ಸ್ಥಾನವಾಗಿರುವ ವಿ.ವಿಯ `ಚೇಂಜ್ ಸ್ಕ್ವೇರ್~ನಲ್ಲಿ ಕುಣಿದು ಕುಪ್ಪಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry