ಶುಕ್ರವಾರ, ಏಪ್ರಿಲ್ 16, 2021
23 °C

ಯೆಮನ್: ಹತ್ತು ಬಂಡಕೋರರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸನಾ (ಎಎಫ್‌ಪಿ): ಆಡಳಿತ ವಿರೋಧಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದ ಯೆಮನ್‌ನ ಸೇನಾ ಬಣವೊಂದರ ಹತ್ತು ಬಂಡುಕೋರರನ್ನು ಗುಂಡಿಟ್ಟು ಕೊಲ್ಲಲಾಗಿದೆ.ಕರ್ತವ್ಯ ನಿರತವಾಗಿದ್ದ ಸಶಸ್ತ್ರ ಸೇನಾ ವಿಭಾಗದ ಜನರಲ್ ಅಲಿ ಮೊಹಸೀನ್ ಅಲ್ ಅಹಮರ್ ನೇತೃತ್ವದ ತುಕಡಿಯ ಒಂಬತ್ತು ಜನರು ಹಾಗೂ ಸ್ವತಃ ಅಲಿ ಮೊಹಸಿನ್ ಅವರನ್ನು ಸರ್ಕಾರವು ಮೋಸದಿಂದ ಕೊಂದು ಹಾಕಿದೆ. ಶನಿವಾರ ಮತ್ತು ಭಾನುವಾರ  ಈ ಹತ್ಯೆ ನಡೆಸಲಾಗಿದೆ ಎಂದು ಬಂಡುಕೋರರ ಬಣದ ಹೇಳಿಕೆಯಲ್ಲಿ ತಿಳಿಸಲಾಗಿದೆ.ಈ ಹೇಳಿಕೆಯನ್ನು ಭಾನುವಾರ ಬಿಡುಗಡೆ ಮಾಡಲಾಗಿದ್ದು ಇದಕ್ಕೆಲ್ಲಾ ಯೆಮೆನ್ ಅಧ್ಯಕ್ಷರ ಪುತ್ರ ಅಹಮ್ಮದ್ ಮತ್ತು ಈತನ ಸಂಬಂಧಿಕರೇ ಇರುವ ಇತರೆ ರಕ್ಷಣಾ ಪಡೆಗಳು ಕಾರಣವಾಗಿವೆ ಎಂದು ಆಪಾದಿಸಿದೆ.ಇಂತಹ ಕೃತ್ಯವು ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸುವ ಬದಲಿಗೆ ಅವರ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಹೇಳಿಕೆ ವಿವರಿಸಿದೆ.ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅವರ ಸುದೀರ್ಘ 33 ವರ್ಷಗಳ ನಿರಂಕುಶ ಆಡಳಿತವನ್ನು ವಿರೋಧಿಸಿ ಪ್ರಜಾಪ್ರಭುತ್ವ ವಾದಿಗಳು ಇದೇ ಜನವರಿಯಿಂದಲೇ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.