ಯೇಸುದಾಸ್‌ಗೆ ಪ್ರಶಸ್ತಿ

7

ಯೇಸುದಾಸ್‌ಗೆ ಪ್ರಶಸ್ತಿ

Published:
Updated:
ಯೇಸುದಾಸ್‌ಗೆ ಪ್ರಶಸ್ತಿ

ಶ್ರೀರಾಮ ಸೇವಾ ಮಂಡಳಿ: ಯುಗಾದಿ ರಾಮನವಮಿ ಸಂಗೀತ. ಶನಿವಾರ ಸಂಜೆ 5.15ಕ್ಕೆ ನಿರಂಜನಾ ಶ್ರೀನಿವಾಸನ್ ಮತ್ತು ತಂಡ. ನಂತರ ಡಾ.ಮೈಸೂರು ಮಂಜುನಾಥ್ (ಪಿಟೀಲು) ಮತ್ತು ಪುರ್ಬಾಯನ್ ಚಟರ್ಜಿ (ಸಿತಾರ್) ಅವರಿಂದ ಕರ್ನಾಟಕ, ಹಿಂದುಸ್ತಾನಿ ಜುಗಲ್‌ಬಂದಿ. ಪಕ್ಕವಾದ್ಯದಲ್ಲಿ ತಿರುವಾರೂರು ಭಕ್ತವತ್ಸಲಂ, ವಿಶ್ವನಾಥ ನಾಕೋಡ.

 

ಭಾನುವಾರ ಬೆಳಿಗ್ಗೆ 8ಕ್ಕೆ ಮಾಂಬಲಮ್ ಎಂ.ಕೆ.ಎಸ್. ಶಿವ ಮತ್ತು ತಂಡದಿಂದ ನಾದಸ್ವರ. 10.30ಕ್ಕೆ ಕೆ.ಜೆ. ಯೇಸುದಾಸ್ ಅವರಿಗೆ ‘‘ಎಸ್.ವಿ. ನಾರಾಯಣ ಸ್ವಾಮಿ ರಾವ್’ ರಾಷ್ಟ್ರೀಯ ಪ್ರಶಸ್ತಿ ಪ್ರದಾನ. ಸಂಜೆ 6.30ಕ್ಕೆ ಯೇಸುದಾಸ್, ಎಸ್.ಆರ್.ಮಹದೇವ ಶರ್ಮಾ, ತಿರುವಾರೂರ್ ಭಕ್ತವತ್ಸಲಂ, ಟಿ.ರಾಧಾಕೃಷ್ಣನ್ ಸಂಗೀತ ಕಛೇರಿ. ಸೋಮವಾರ ಸಂಜೆ 4.30ರಿಂದ ಡಾ.ಕೆ.ಮುರಳೀಧರ್ ಮತ್ತು ತಂಡ, ಗಾಯತ್ರಿ ವೆಂಕಟರಾಘವನ್, -ಬಿ.ಯು. ಗಣೇಶ್ ಪ್ರಸಾದ, ಸಿ.ಚೆಲುವರಾಜ್, ಸುಕನ್ಯಾ ರಾಮ್‌ಗೋಪಾಲ್ ಅವರಿಂದ ಸಂಗೀತ ಗೋಷ್ಠಿ.

ಸ್ಥಳ: ಕೋಟೆ ಹೈಸ್ಕೂಲ್ ಆವರಣ, ಚಾಮರಾಜಪೇಟೆ.1939ರಲ್ಲಿ ಎಸ್.ವಿ. ನಾರಾಯಣಸ್ವಾಮಿ ರಾವ್ ಶ್ರೀ ರಾಮಸೇವಾ ಮಂಡಲಿ ಟ್ರಸ್ಟ್ ಸ್ಥಾಪಿಸಿ ಸಂಗೀತ ಉತ್ಸವ ಆರಂಭಿಸಿದ್ದರು. ಟ್ರಸ್ಟ್‌ಗಾಗಿಯೇ ತಮ್ಮ ಜೀವನ ಸಮರ್ಪಿಸಿಕೊಂಡಿದ್ದರು. ತಮ್ಮ 75ನೇ ವಯಸ್ಸಿನಲ್ಲಿ 2000ದಲ್ಲಿ ನಿಧನರಾದರು.

 

ಅವರ ನೆನಪಿನಲ್ಲಿ ರಾಮಸೇವಾ ಮಂಡಲಿ ಟ್ರಸ್ಟ್ 2001ರಿಂದ ಖ್ಯಾತ ಸಂಗೀತಗಾರರೊಬ್ಬರಿಗೆ ಎಸ್.ವಿ. ನಾರಾಯಣ ಸ್ವಾಮಿ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಮೊದಲ ವರ್ಷದ ಪ್ರಶಸ್ತಿಯನ್ನು ಸಂಗೀತ ಕಲಾನಿಧಿ ಎಂ.ಎಸ್. ಸುಬ್ಬಲಕ್ಷ್ಮಿ ಅವರಿಗೆ ನೀಡಿ ಗೌರವಿಸಲಾಗಿತ್ತು. ಭೀಮಸೇನ ಜೋಶಿ, ಪಂಡಿತ್ ಜಸರಾಜ್, ಆರ್.ಕೆ. ಶ್ರೀಕಂಠನ್ ಮಂತಾದವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಈ ವರ್ಷದ ಪ್ರಶಸ್ತಿಯನ್ನು ಹೆಸರಾಂತ ಗಾಯಕ ಡಾ.ಕೆ.ಜೆ. ಯೇಸುದಾಸ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ 50,000 ರೂ. ನಗದು, ಸ್ಮರಣ ಸಂಚಿಕೆ ಮತ್ತು ಬಿರುದು ಪತ್ರ ಒಳಗೊಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry