ಶುಕ್ರವಾರ, ಜೂಲೈ 10, 2020
22 °C

ಯೇಸುದಾಸ್ ಸಂಧ್ಯಾರಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೇಸುದಾಸ್ ಸಂಧ್ಯಾರಾಗ

ಡಿಗ್ನಿಟಿ ಫೌಂಡೇಷನ್: ಸೋಮವಾರ ಬಹುಭಾಷಾ ಹಿನ್ನೆಲೆ ಗಾಯಕ, ಸಂಗೀತಗಾರ ಕೆ.ಜೆ. ಯೇಸುದಾಸ್ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ.ಕೇರಳ ಮೂಲದ ಗಾಯಕ ಯೇಸುದಾಸ್ ಐದು ದಶಕಗಳ ತಮ್ಮ ಸಂಗೀತ ಯಾತ್ರೆಯಲ್ಲಿ ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ, ಬಂಗಾಲಿ, ಗುಜರಾತಿ, ಒಡಿಯಾ, ಮರಾಠಿ, ಪಂಜಾಬಿ, ಸಂಸ್ಕೃತ ಸೇರಿ ವಿವಿಧ ಭಾಷೆಯಲ್ಲಿ 50 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ರಷ್ಯನ್, ಮಲಯ, ಅರೆಬಿಕ್, ಲ್ಯಾಟಿನ್ ಮತ್ತು ಇಂಗ್ಲಿಷ್‌ನಲ್ಲಿಯೂ ಹಾಡಿದ ಕೀರ್ತಿ ಅವರದು.ಹಿನ್ನೆಲೆ ಗಾಯನಕ್ಕಾಗಿ ಕೇರಳ ಸರ್ಕಾರದಿಂದ 30 ಸಲ ರಾಜ್ಯ ಪ್ರಶಸ್ತಿ ಪಡೆದಿರುವ ಅವರು 7 ಸಲ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಕೇರಳ ಸರ್ಕಾರ ಅವರಿಗೆ ಆಸ್ಥಾನ ಗಾಯಕ ಎಂಬ ಬಿರುದನ್ನೂ ನೀಡಿದೆ.ಡಿಗ್ನಿಟಿ ಫೌಂಡೇಷನ್:  ಒಂದು ಅಂದಾಜಿನ ಪ್ರಕಾರ ದೇಶದಲ್ಲಿ 9 ಕೋಟಿಗೂ ಹೆಚ್ಚು ವೃದ್ಧರಿದ್ದಾರೆ. ಬಾಳ ಸಂಜೆಯಲ್ಲಿರುವ ಈ ಹಿರಿಯ ಜೀವಗಳಿಗೆ ನೆಮ್ಮದಿಯ ಸೂರು, ಹೊಟ್ಟೆ ತುಂಬ ಊಟ, ಔಷಧ, ಬಟ್ಟೆ ಸಿಗುವುದು ಕೂಡ ಸುಲಭದ ಸಂಗತಿಯಾಗಿಲ್ಲ.ಇಂಥ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ದುಡಿಯುತ್ತಿರುವ ಡಿಗ್ನಿಟಿ ಫೌಂಡೇಷನ್ ಅಂತರ‌್ರಾಷ್ಟ್ರೀಯ ಮಟ್ಟದ ಸ್ವಯಂಸೇವಾ ಸಂಸ್ಥೆ. ಮುಂಬೈ, ಕೋಲ್ಕತ್ತ, ಚೆನ್ನೈ, ಬೆಂಗಳೂರು ಮತ್ತು ಪುಣೆಗಳಲ್ಲಿ ಸೇವೆ ಒದಗಿಸುತ್ತಿದೆ. ಅವರಿಗೆ ವೃತ್ತಿಪರ ಸಲಹೆ, ಸಹಾಯವಾಣಿ, ಉದ್ಯೋಗ ಅವಕಾಶ, ಆಹಾರ ಧಾನ್ಯ ವಿತರಣೆ, ನೆನಪಿನ ಶಕ್ತಿ ಕಳೆದುಕೊಂಡವರಿಗೆ, ಅಶಕ್ತರಿಗೆ ಆಶ್ರಯ ಕೇಂದ್ರಗಳ್ನು ನಡೆಸುತ್ತಿದೆ.ಈ ಸದುದ್ದೇಶಗಳಿಗಾಗಿ ಹಣ ಸಂಗ್ರಹಿಸಲು ಅದು ಈ ಸಂಗೀತ ಕಚೇರಿ ಏರ್ಪಡಿಸಿದೆ.

ಸ್ಥಳ: ಸೇಂಟ್ ಜಾನ್ಸ್ ಸಭಾಂಗಣ, ಕೋರಮಂಗಲ, ಬಿಡಿಎ ಸಂಕೀರ್ಣದ ಎದುರು. ಸಂಜೆ 6 ರಿಂದ ರಾತ್ರಿ 9. ದೇಣಿಗೆ ಪಾಸ್‌ಗಳಿಗಾಗಿ 99022 44335 ಮತ್ತು 4151 1307. ವಿವರಗಳಿಗೆ www.dignityfoundation.com

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.