ಬುಧವಾರ, ಜೂನ್ 23, 2021
21 °C

ಯೇಸು ಸಮಾಧಿ ಸ್ಥಳ ಪತ್ತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಜೆರುಸಲೇಂನಲ್ಲಿ ಒಂದನೇ ಶತಮಾನಕ್ಕೆ ಸೇರ್ದ್ದಿದು ಎನ್ನಲಾದ ಕ್ರೈಸ್ತರ ಸಮಾಧಿಯಲ್ಲಿ ಪತ್ತೆಯಾಗಿರುವ, ಕೆತ್ತನೆ ಕೆಲಸಗಳಿರುವ ಶವಪೆಟ್ಟಿಗೆ ಇದೀಗ ಪುರಾತತ್ವಜ್ಞರ ಕುತೂಹಲಕ್ಕೆ ಕಾರಣವಾಗಿದೆ. ಇದರೊಂದಿಗೆ ಹಲವು ಸಂಶಯಗಳಿಗೂ ಎಡೆಮಾಡಿಕೊಟ್ಟಿದೆ. ಇದು ಕ್ರಿಸ್ತಶಕ 70ನೇ ಶತಮಾನಕ್ಕೆ ಸೇರಿದ್ದು, ಯೇಸು ಕ್ರಿಸ್ತರನ್ನು ಸಮಾಧಿ ಮಾಡಲಾದ ಸ್ಥಳವೂ ಆಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.        ರೋಬೋಟ್ ಕೈಗೆ ರಿಮೋಟ್ ಕಂಟ್ರೋಲ್ ಹೊಂದಿದ ಕ್ಯಾಮೆರಾಗಳನ್ನು ಅಳವಡಿಸಿ ಸಂಶೋಧಕರು ಪತ್ತೆ ಹಚ್ಚಿರುವ ಸಮಾಧಿ ಸ್ಥಳದಲ್ಲಿ ಸಿಕ್ಕ ಸುಣ್ಣದ ಕಲ್ಲಿನ ಪೆಟ್ಟಿಗೆಯಲ್ಲಿ `ಡಿವೈನ್ ಜೆಹೋವಾ~ ಎಂದು ಗ್ರೀಕ್‌ನಲ್ಲಿ ಬರೆಯಲಾಗಿದೆ. ಇದು ಕ್ರೈಸ್ತರು ನಂಬುವ ಪುನರುತ್ಥಾನವನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.