ಯೋಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

7

ಯೋಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Published:
Updated:

ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಟಿ.ಎಚ್ ಗುಡ್ಡಪ್ಪ ತಿಳಿಸಿದ್ದಾರೆ.ಈವೆಗೆ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ರಾಘವೇಂದ್ರ ಶ್ರೀಗಳಿಂದ ಆರಂಭವಾದ ಆಶ್ರಮ ಇಂದಿಗೂ ಯೋಗಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಶ್ರೀಗಳ ಆಶೀರ್ವಾದ ಮತ್ತು ಪ್ರೇರಣೆಯಿಂದ ಆಶ್ರಮದ ವಿದ್ಯಾರ್ಥಿಗಳು ಎಲ್ಲಾ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.ಈಗ ವಿದ್ಯಾರ್ಥಿಗಳಾದ ದರ್ಶನ್, ಗುರುಸ್ವಾಮಿ, ಶ್ರಮಣ ಕುಮಾರ, ತಿಪ್ಪೇಸ್ವಾಮಿ, ತೇಜಾ, ನಯನಾ, ಸ್ಮಿತಾ, ಅಂಜನಾ ಯೋಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಯೋಗ ತರಬೇತುದಾರ ಸಂತೋಷ್ ಕುಮಾರ್ ಅವರ ಪಾತ್ರ ಪ್ರಮುಖವಾಗಿದೆ ಎಂದರು.ಯೋಗ ತರಬೇತುದಾರ ಸಂತೋಷ್ ಕುಮಾರ್ ಮಾತನಾಡಿ, ಯೋಗ ಕೇವಲ ಸ್ಪರ್ಧೆಗಾಗಿ ಕಲಿಯುವಂತದ್ದಲ್ಲ. ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಯೋಗಾಭ್ಯಾಸ ಮಾಡಬೇಕು. ಆಶ್ರಮದಲ್ಲಿ ಪ್ರತೀ ವರ್ಷ ಸುಮಾರು 2 ಸಾವಿರ ವಿದ್ಯಾರ್ಥಿಗಳು ಯೋಗ ತರಬೇತಿ ಪಡೆಯುತ್ತಾರೆ. ಇದರಲ್ಲಿ 50 ವಿದ್ಯಾರ್ಥಿಗಳು ವಿಶೇಷ ಆಸನಗಳನ್ನು ಮಾಡುವ ಪರಿಣತಿ ಹೊಂದಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟ ದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.

ಉಪನ್ಯಾಸಕ ಶಿವಕುಮಾರ್, ಮಂಜುನಾಥ್, ವೇಣು, ವಿ.ಎಂ. ದೇವರಾಜ್ ಹಾಜರಿದ್ದರು.ಕೆರೆ ಅಭಿವೃದ್ಧಿಗೆ ರೂ 1 ಕೋಟಿ

ಬಿ.ದುರ್ಗ ಹೋಬಳಿಯ ಸಿದ್ದಯ್ಯನ ಕೆರೆ ಅಭಿವೃದ್ಧಿಗೆ ರೂ 1 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.ತಾಲ್ಲೂಕಿನ ಗುಲಗಂಜಿಹಟ್ಟಿಯಲ್ಲಿ ಈಚೆಗೆ ಗಣೇಶ ವಿಸರ್ಜನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry