ಯೋಗದಿಂದ ಸತ್ಪ್ರಜೆ ನಿರ್ಮಾಣ

7

ಯೋಗದಿಂದ ಸತ್ಪ್ರಜೆ ನಿರ್ಮಾಣ

Published:
Updated:
ಯೋಗದಿಂದ ಸತ್ಪ್ರಜೆ ನಿರ್ಮಾಣ

ಬೆಂಗಳೂರು: ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಬುಧವಾರ ನಾಡೋಜ ಗೌರವ ನೀಡಿ ಸನ್ಮಾನಿಸಲಾಯಿತು.ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿರುವ ಬಿ.ಕೆ.ಎಸ್. ಅಯ್ಯಂಗಾರ್ ಅವರ ನಿವಾಸದ ಬಳಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಎ. ಮುರಿಗೆಪ್ಪ ಅವರು ಗೌರವ ಫಲಕ, ಪ್ರಮಾಣ ಪತ್ರ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಯ್ಯಂಗಾರ್ ಅವರು, `80 ವರ್ಷಗಳ ಕಾಲ ಯೋಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ನನಗೆ ನಾಡೋಜ ಗೌರವವನ್ನು ನೀಡಿರುವುದು ಸರಸ್ವತಿಯ ವರಪ್ರಸಾದ ಎಂದು ಭಾವಿಸುತ್ತೇನೆ~ ಎಂದು ಭಾವುಕರಾಗಿ ನುಡಿದರು.`ನಾನು ಕನ್ನಡ ನಾಡಿನ ಹುಡುಗ. ಜಗತ್ತಿನ ನಾನಾ ಭಾಗಗಳಲ್ಲಿ ಯೋಗ ಪ್ರದರ್ಶನ ನೀಡಿದ್ದೇನೆ. ಸಾವಿರಾರು ಯೋಗ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿದ ತೃಪ್ತಿ ಇದೆ~ ಎಂದರು.

`ಯೋಗ ಗುರುಗಳು ಯೋಗಾಭ್ಯಾಸವನ್ನು ಕಲಿಸುವ ಮೂಲಕ ನಾಡಿನ ಉತ್ತಮ ಪ್ರಜೆಗಳನ್ನು ರೂಪಿಸಬೇಕು~ ಎಂದು ಶಿಷ್ಯರಿಗೆ ಕರೆ ನೀಡಿದರು.ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ, `ಭಾರತೀಯ ಮೌಲ್ಯಗಳ ಪ್ರತೀಕವೆನಿಸಿರುವಂತಹ ಜೀವನ ವಿಧಾನವನ್ನು ವಿಶ್ವದಾದ್ಯಂತ ಪರಿಚಯಿಸಿದ ಕೀರ್ತಿ ಅಯ್ಯಂಗಾರ್ ಅವರಿಗೆ ಸಲ್ಲುತ್ತದೆ~ ಎಂದರು.ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎಫ್. ಸಲ್ಡಾನ, ವಿ.ವಿಯ ಅಧ್ಯಯನಾಂಗದ ನಿರ್ದೇಶಕ ಎಫ್.ಟಿ. ಹಳ್ಳಿಕೇರಿ, ಸಿಂಡಿಕೇಟ್ ಸದಸ್ಯರಾದ ಪುಟ್ಟಣ್ಣಯ್ಯ ಅವರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry