ಯೋಗದ ಲಾಭ ಬಿಂಬಿಸಿದ ಯೋಗಥಾನ್

7

ಯೋಗದ ಲಾಭ ಬಿಂಬಿಸಿದ ಯೋಗಥಾನ್

Published:
Updated:

ಬೆಂಗಳೂರು:  ಆರೋಗ್ಯಕರ ಜೀವನ ವಿಧಾನದ ಭಾಗವಾಗಿ ಯೋಗ ಅಳವಡಿಸಿಕೊಳ್ಳುವುದರ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಆಯುಷ್ ಇಲಾಖೆಯು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ `ಯೋಗಥಾನ್~ ಎಂಬ ಯೋಗ ನಡಿಗೆಯಲ್ಲಿ ನೂರಾರು ಯೋಗ ಚಿಕಿತ್ಸಕರು, ಗಣ್ಯರು, ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ಮತ್ತು ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡರು.`ಯೋಗಥಾನ್~ ನಡಿಗೆಯಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಲಾಯಿತು. ಬೆಳಗಿನ ನಡಿಗೆಯೊಂದಿಗೆ ಯೋಗ ಮಾಡುವುದರ ಪ್ರಯೋಜನಗಳನ್ನು ಬಿಂಬಿಸಲಾಯಿತು.ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಫ್ರೀಡಂ ಪಾರ್ಕ್ ಬಳಿ ಹಸಿರು ನಿಶಾನೆ ತೋರುವುದರ ಮೂಲಕ `ಯೋಗಥಾನ್~ಗೆ ಚಾಲನೆ ನೀಡಿದರು.ಫ್ರೀಡಂ ಪಾರ್ಕ್‌ನಿಂದ ಕೆ.ಆರ್. ವೃತ್ತ, ನೃಪತುಂಗ ರಸ್ತೆ ಮೂಲಕ ಸಾಗಿದ `ಯೋಗಥಾನ್~ ಕಬ್ಬನ್ ಉದ್ಯಾನವನದ ನಗರ ಕೇಂದ್ರ ಗ್ರಂಥಾಲಯದ ಬಳಿ ಅಂತ್ಯಗೊಂಡಿತು.ನಟಿ ತಾರಾ, ಚಿತ್ರರಂಗದ ಪ್ರಮುಖರಾದ ಶಿವರಾಮ್, ಚಂದ್ರಶೇಖರ್ ಮತ್ತು ವಿಜಯಕುಮಾರ್ `ಯೋಗಥಾನ್~ಗೆ ಕಳೆ ತಂದುಕೊಟ್ಟರು. ಶಾಸಕರಾದ ವಿಶ್ವನಾಥ್, ನೆ.ಲ. ನರೇಂದ್ರಬಾಬು, ವಿಜಯಕುಮಾರ್, ಉಪ ಮೇಯರ್ ಎಸ್. ಹರೀಶ್, ಹಿರಿಯ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರ್, `ಆಯುಷ್~ ಇಲಾಖೆಯ ನಿರ್ದೇಶಕ ಜಿ.ಎನ್.ಶ್ರೀಕಂಠಯ್ಯ ಮುಂತಾದವರು ಯೋಗಥಾನ್‌ನಲ್ಲಿ ಪಾಲ್ಗೊಂಡಿದ್ದರು.ಈ ತಿಂಗಳ 9ರಿಂದ 13ರವರೆಗೆ ನಡೆಯಲಿರುವ `ಅಂತರರಾಷ್ಟ್ರೀಯ ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ಆರೋಗ್ಯ ಎಕ್ಸ್‌ಪೋ- 2012~ ಅಂಗವಾಗಿ ಆಯುಷ್ ಇಲಾಖೆಯು ಈ ಯೋಗಥಾನ್ ನಡಿಗೆಯನ್ನು ಹಮ್ಮಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry