ಮಂಗಳವಾರ, ಜೂನ್ 15, 2021
27 °C

ಯೋಜನೆಗಳ ಜಾರಿಗೆ ಇಚ್ಛಾಶಕ್ತಿ ಪ್ರದರ್ಶಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ನಗರಸಭೆಯ  ಬಜೆಟ್ ಕೇವಲ ಅಂಕಿ ಅಂಶವಾಗಿರದೆ   ವಾಸ್ತವಕ್ಕೆ ಹತ್ತಿರವಿರಬೇಕು.  ಬಜೆಟ್ ನ ಘೋಷಿತ ಯೋಜನೆಗಳನ್ನು  ಕಾರ್ಯರೂಪಕ್ಕೆ ತರಲು  ಅಧಿಕಾರಿಗಳು ಇಚ್ಚಾಶಕ್ತಿ ಹೊಂದಬೇಕು ಎಂದು ನಾಗರಿಕರು ಆಗ್ರಹಿಸಿರು.ಪುರಭವನದಲ್ಲಿ ನಗರಸಭೆ ಅಧ್ಯಕ್ಷ ಎಂ.ಜಗದೀಶರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ 2012-13ನೇ ಸಾಲಿನ ಆಯ-ವ್ಯಯದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಈ ಒತ್ತಾಯ ಮಾಡಿದರು. ಸಭೆಯಲ್ಲಿ ಮಾತನಾಡಿದ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು,   ನಗರಸಭಾ ಮಾಜಿ ಸದಸ್ಯರು, ಪತ್ರಕರ್ತರು  ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು, ಬಜೆಟ್ ಭರವಸೆಗಳಿಂದ ಕೂಡಿರಬಾರದು.ಸಾರ್ವಜನಿಕರ ಮೂಲ ಸೌಲಭ್ಯಗಳನ್ನು ಪೂರೈಸುವ ಕಡೆಗೆ ಆದ್ಯತೆ ನೀಡಬೇಕು. ಆದರೆ ಕಳೆದ ಕೆಲವು ವರ್ಷಗಳಿಂದ ನಗರಸಭೆಯಲ್ಲಿ ಮಂಡಿತವಾಗುತ್ತಿರುವ ಬಜೆಟ್‌ಗಳಲ್ಲಿ ಭರವಸೆ ಬಿಟ್ಟರೆ ಬೇರೆ ಇರುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆರ್ಥಿಕ ಬಜೆಟ್‌ನಂತೆ ನಗರಸಭೆಯೂ ಸಾಮಾಜಿಕ ಬಜೆಟ್ ಕಡೆಗೂ ಚಿಂತನೆ ಮಾಡಬೇಕೆಂದರು.ನಗರದಲ್ಲಿರುವ ಸಮಸ್ಯೆಗಳ ನಿವಾರಣೆಗೆ ಈ ಬಾರಿಯ ಬಜೆಟ್‌ನಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ನಗರಸಭೆ ಮುಂದಿನ ಬಜೆಟ್‌ನಲ್ಲಿ ಕೈಗೆತ್ತಿಕೊಳ್ಳಲ್ಲಿರುವ ಹೊಸ ಕಾಮಗಾರಿಗಳ ಬಗ್ಗೆ ಮಾತನಾಡಿದ ಪೌರಾಯುಕ್ತ ಚಿಕ್ಕಣ್ಣ, ನಗರದ ನಾಲ್ಕು ಕಡೆಗಳಲ್ಲಿ ಕುಡಿಯುವ ನೀರು ಶುದ್ದೀಕರಣ ಘಟಕಗಳು, ವಿವಿಧೆಡೆ 10 ಶೌಚಾಲಯಗಳು, 8 ಪಾರ್ಕ್‌ಗಳು,  ಹೊಸ ಬಸ್ ಶೆಲ್ಟರ್‌ಗಳ ನಿರ್ಮಾಣ, ಡಿ.ಕ್ರಾಸ್ ಸರ್ಕಲ್ ಹತ್ತಿರ ಮಿನಿಬಸ್ ನಿಲ್ದಾಣ ನಿರ್ಮಾಣ, ಡಿ ಕ್ರಾಸ್ ವೃತ್ತದಿಂದ ರೈಲ್ವೆ ನಿಲ್ದಾಣ ವೃತ್ತದವರೆಗೂ ಬೀದಿ ದೀಪಗಳನ್ನು ಅಳವಡಿಸುವುದು. ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳುವುದು ಹಾಗೂ ಮೊದಲ ಹಂತದಲ್ಲಿ ಸಿದ್ದಲಿಂಗಯ್ಯ ಸರ್ಕಲ್‌ನಿಂದ ಪಂಪ್‌ಹೌಸ್ ತನಕ ರಸ್ತೆ ವಿಸ್ತರಣೆ ಮಾಡಲಾಗುವುದು. ನಗರದ ಪ್ರಮುಖ ರಸ್ತೆಗಳಲ್ಲಿ ಪುಟ್‌ಪಾತ್ ನಿರ್ಮಾಣ ಮಾಡುವುದು. ನೀರಿನ ಶುಲ್ಕ, ಕಟ್ಟಡ ಪರವಾನಗಿ, ಮನೆ ಕಂದಾಯ ವಸೂಲಾತಿ ನಿರ್ವಹಣೆಗಳನ್ನು ಗಣಕೀಕರಣಗೊಳಿಸುವ ವ್ಯವಸ್ಥೆ ಜಾರಿ ಬಗ್ಗೆ ಬಜೆಟ್‌ನಲ್ಲಿ ತಿಳಿಸಲಾಗುತ್ತಿದೆ ಎಂದರು. ನಗರಸಭಾ ಸದಸ್ಯ ತ.ನ.ಪ್ರಭುದೇವ್ ಮಾತನಾಡಿ, ನಗರ ಸಭೆ ಬಜೆಟ್‌ನಲ್ಲಿ ಮೂಲ ಸೌಲಭ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಕಂದಾಯ ಮತ್ತು ಬಾಡಿಗೆ ವಸೂಲಾತಿಯಲ್ಲಿ ಅಧಿಕಾರಿಗಳಲ್ಲಿ ಇಚ್ಚಾಶಕ್ತಿ ಕೊರತೆ ಇದೆ. ನಗರ ಸಭೆ ಆದಾಯದಲ್ಲಿ ಹೆಚ್ಚಿನ ಪಾಲು ಸಿಬ್ಬಂದಿ ಸಂಬಳಕ್ಕೆ ಹೋಗುತ್ತದೆ.  ನಗರ ಸಭೆಯೊಂದಿಗೆ ಸಾರ್ವಜನಿಕರ ಸಹಕಾರ ನೀಡಿದರೆ ಅಭಿವೃದ್ದಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.