ಶುಕ್ರವಾರ, ಏಪ್ರಿಲ್ 16, 2021
20 °C

ಯೋಜನೆಗಳ ಸದ್ಬಳಕೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ಜನಸಾಮಾನ್ಯರಿಗೆ ಯೋಜನೆಗಳ ಅರಿವು ಮೂಡಿಸುವಲ್ಲಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ ಎಂದು ಪರೀಕ್ಷಾರ್ಥಿ ಅಧಿಕಾರಿ ಮತ್ತು ಸಹಾಯಕ ಆಯುಕ್ತೆ ಪಲ್ಲವಿ ಆಕುರಾತಿ ಕರೆ ನೀಡಿದರು. ಅವರು ಗುರುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ ಅವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮಸ್ಥರು ಯೋಜನೆಗಳನ್ನು ಅರಿತು ಅವುಗಳ ಸದ್ಬಳಕೆ ಮಾಡಿಕೊಳ್ಳಲು ಕಿವಿ ಮಾತು ಹೇಳಿದರು.ಶಾಸಕ ಡಾ. ಶರಣಪ್ರಕಾಶ ಪಾಟೀಲ ಊಡಗಿ ಮಾತನಾಡಿ  ಭ್ರಷ್ಟ ರಾಜಕೀಯ ವ್ಯವಸ್ಥೆ ಬೇರು ಸಹಿತ ಕಿತ್ತೊಗೆಯಲು ಜನಲೋಕಪಾಲ ವಿಧೇಯಕ ಜಾರಿ ಪ್ರಸಕ್ತ ಅತ್ಯವಶ್ಯಕವಾಗಿದೆ. ಡಾ. ಅಂಬೇಡ್ಕರ್ ಅವರು ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆ ಅಪಾರ ಎಂದರು. ದಲಿತ ಹಿರಿಯ ಮುಖಂಡ ಗಣಪತರಾವ ಚಿಮ್ಮನ್‌ಚೋಡಕರ್, ಮಹಾಂತಪ್ಪ ಸಂಗಾವಿ, ದಸಂಸ ರಾಜ್ಯ ಸಂಚಾಲಕ ಶಿವರಾಯ ದೊಡ್ಡಮನಿ, ರಾಜ್ಯ ಸಂಘಟನೇ ಸಂಚಾಲಕ ಶಿವಕುಮಾರ ಕೊಳ್ಕುರ ಮಾತನಾಡಿದರು.ಜಿಪಂ ಸದಸ್ಯರಾದ ಶಿವಶರಣಪ್ಪ ಪಾಟೀಲ ತೆಲ್ಕೂರ, ಈರಾರೆಡ್ಡಿ ಹೂವಿನಬಾವಿ ಬಟಗೇರಾ, ಪುರಸಭೆ ಅಧ್ಯಕ್ಷ ಶಿವರುದ್ರಪ್ಪ ಕೋಳಕೂರ, ದಸಂಸ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ ಸಾತನೂರ, ಸಿಪಿಐ ಈ.ಎಸ್.ವೀರಭದ್ರಯ್ಯ ವೇದಿಕೆಯಲ್ಲಿದ್ದರು. ಮಾರುತಿ ಹುಳಗೊಳ್ಕರ ಬುದ್ದ ವಂದನೆ ಪಠಿಸಿದರು. ನ್ಯಾಯವಾದಿ ವಿಜಯಲಕ್ಷ್ಮೀ ದೊಡ್ಡಮನಿ ಪ್ರಾರ್ಥಿಸಿದರು. ವಿದ್ಯಾರ್ಥಿ ಗುರುರಾಜ ಸಿದ್ರಾಮಪ್ಪ ರಂಜೋಳ ಅಂಬೇಡ್ಕರ ಅವರ ವೈಯಕ್ತಿಕ ಗೀತೆ ಹಾಡಿದನು.ತಹಸೀಲ್ದಾರ ಮತ್ತು ಆಚರಣೆ ಸಮಿತಿ ಅಧ್ಯಕ್ಷ ನರಸಿಂಗರಾವ ಸ್ವಾಗತಿಸಿದರು. ಪ್ರೋ. ಶೋಭಾದೇವಿ ಚಕ್ಕಿ ನಿರೂಪಿಸಿದರು. ತಾಪಂ ಇಓ ಬಸವರಾಜ ನಾಯ್ಕರ್ ವಂದಿಸಿದರು.ಇದಕ್ಕೂ ಮುನ್ನ ಪಟ್ಟಣದ ಮುಖ್ಯರಸ್ತೆಯ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೂರ್ತಿಗೆ ಪೂಜೆ ನೆರವೆರಿಸಿ ಮುಖ್ಯರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದು ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ ಸಮಾವೇಶಗೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.