ಯೋಜನೆ ಅನುಕೂಲವಾಗಿದೆಯೇ?

ಬುಧವಾರ, ಜೂಲೈ 24, 2019
28 °C

ಯೋಜನೆ ಅನುಕೂಲವಾಗಿದೆಯೇ?

Published:
Updated:

ಚಿತ್ರದುರ್ಗ: ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೊಳಿಸಲು ಪೂರಕವಾದ ಕೆರೆಕಟ್ಟೆಗಳ ಅಭಿವೃದ್ಧಿಗೆ ಸಣ್ಣ ನೀರಾವರಿ, ಜಲಸಂವರ್ಧನಾ ಯೋಜನೆ ಘಟಕ ಮತ್ತು ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ಇಲಾಖೆಗಳ ಮೂಲಕ ಸುಮಾರು ್ಙ 150 ಕೋಟಿಯಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ, ಈ ಕಾಮಗಾರಿಗಳ ಪ್ರಗತಿಯಿಂದ ಏನಾದರೂ ಅನುಕೂಲವಾಗಿದೆಯೇ ಎನ್ನುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪ್ರಗತಿ ವರದಿಯ ವಿವರ ಪಟ್ಟಿ ನೀಡುವಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ  ಟಿ. ರವಿಕುಮಾರ್  ಸೂಚನೆ ನೀಡಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.ಜಲಸಂವರ್ಧನಾ ಯೋಜನೆಯಿಂದ ಕೈಗೊಂಡಿರುವ ಕಾಮಗಾರಿ ಕೆಲಸಗಳು ಯಾವುವು?, ಎಲೆಲ್ಲಿ ಏನು ಕೆಲಸವಾಗಿದೆ? ಎಂದು ಯೋಜನಾ ಸಮನ್ವಯಾಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡುವಂತೆ ತಿಳಿಸಿ, ಈ ಮೂರು ಇಲಾಖೆಗಳು ತಾವು ಕೈಗೊಂಡಿರುವಂತಹ ಕಾಮಗಾರಿಗಳ ವಿವರವನ್ನು ಕೂಡಲೇ ನೀಡಬೇಕು ಮತ್ತು ಕಾಮಗಾರಿಗಳ ಕೆಲಸ `ಡೂಪ್ಲಿಕೇಷನ್~ ಆಗದಂತೆ ನೋಡಿಕೊಳ್ಳಬಹುದು. ಕೆಲಸ ಚೆನ್ನಾಗಿ ಆಗಿದೆಯೋ ಹೇಗೆ? ಎನ್ನುವ ಬಗ್ಗೆಯೂ ವರದಿ ಸಲ್ಲಿಸುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆ ಅಡಿ ಕೊರೆಸಲಾಗಿರುವ ಕೊಳವೆ ಬಾವಿಗಳಿಗೆ ಪಂಪ್‌ಸೆಟ್‌ಗಳು ಹಾಗೂ ವಿದ್ಯುತ್ ಸೌಲಭ್ಯ ಕಲ್ಪಿಸದೆ ಬಾಕಿ ಇರುವಂತಹ ಕೊಳವೆಬಾವಿಗಳಿಗೆ ಸಂಪರ್ಕ ಕಲ್ಪಿಸಲು ಬೆಸ್ಕಾಂ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಕೊಳವೆ ಬಾವಿಗಳಿಗೆ ಒಂದು ತಿಂಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ತಿಳಿಸಿದರು.ಈ ನಿಗಮದ ವತಿಯಿಂದ ಫಲಾನುಭವಿಗಳಿಗೆ ಆರ್ಥಿಕ ನೆರವು ಕಲ್ಪಿಸಲು ಜಾರಿಗೊಳಿಸಿರುವ ಯೋಜನೆ ಅನುಷ್ಠಾನಗೊಳಿಸಲು ಕೂಡಲೇ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆಮಾಡಿ ಕಾರ್ಯಕ್ರಮಗಳ ಸವಲತ್ತು ಕಲ್ಪಿಸುವಂತೆ ಸೂಚಿಸಿದರು.ಜಿಲ್ಲೆಯಲ್ಲಿ ಕೃಷಿ ಕಾರ್ಯ ಚಟುವಟಿಕೆ ಕೈಗೊಳ್ಳಲು ಸಹಕಾರ ಸಂಘಗಳ ಮೂಲಕ 3,150 ರೈತರಿಗೆ ್ಙ 8.35 ಕೋಟಿ `ಅವಧಿ ಸಾಲ~ ಇದುವರೆಗೆ ನೀಡಲಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಸಭೆಗೆ ತಿಳಿಸಿದರು.ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 530 ಸಣ್ಣ ಕೈಗಾರಿಕಾ ಘಟಕಗಳನ್ನು ನೊಂದಣಿ ಮಾಡುವ ಗುರಿ ಇದ್ದು ಜೂನ್ ತಿಂಗಳಲ್ಲಿ 45 ಸಣ್ಣ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿದೆ. ಈ ಘಟಕಗಳ ಸ್ಥಾಪನೆಯಿಂದಾಗಿ 226 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಜಂಟಿ ನಿರ್ದೇಶಕರು ತಿಳಿಸಿದರು.`ನಮ್ಮ ಗ್ರಾಮ-ನಮ್ಮ ರಸ್ತೆ~ ಯೋಜನೆ ಅಡಿ ಕಳೆದ ಸಾಲಿನಲ್ಲಿ ಒಟ್ಟು 39 ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 28 ಕಾಮಗಾರಿ ಕೆಲಸ ಪೂರ್ಣಗೊಳಿಸಲಾಗಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದರು.ಜ್ಲ್ಲಿಲೆಯಲ್ಲಿ ಪ್ರಸಕ್ತ ವರ್ಷ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆ ಅಭಿವೃದ್ಧಿಪಡಿಸಿ ರೇಷ್ಮೆ  ಕೃಷಿಯನ್ನು ವಿಸ್ತರಿಸುವ ಗುರಿ ಹಾಕೊಳ್ಳಲಾಗಿದೆ. ಇದಕ್ಕಾಗಿ ಇಲಾಖೆ ಹಲವಾರು ಪ್ರೋತ್ಸಾಹದಾಯಕ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕರು ತಿಳಿಸಿದರು.ಪ್ರಸಕ್ತ ಶೈಕ್ಷಣಿಕ ವರ್ಷದ ಅರಂಭದಲ್ಲಿ ಈಗಾಗಲೇ ಶೇ 99ರಷ್ಟು ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಯಾಗಿದೆ. ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದಿರುವಂತಹ 778 ಮಕ್ಕಳನ್ನು ಗುರುತಿಸಲಾಗಿದ್ದು, ಅವರಲ್ಲಿ 398 ಮಕ್ಕಳನ್ನು ಶಾಲೆಗೆ ಕರೆತರಲಾಗಿದೆ. ಇನ್ನು 380 ಮಕ್ಕಳು ಹೊರಗಡೆ ಇದ್ದು, ಅವರನ್ನು ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತಿರುವುದಾಗಿ ಉಪ ನಿರ್ದೇಶಕರು ತಿಳಿಸಿದರು.ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಭಾರತಿ ಕಲ್ಲೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಜೆ. ರಂಗಸ್ವಾಮಿ, ಚಂದ್ರಪ್ಪ, ಅನಿತಾ ಬಸವರಾಜು ಭಾಗವಹಿಸಿದ್ದರು.

 

2020ಕ್ಕೆ ಭದ್ರಾ ಮೇಲ್ದಂಡೆ ಪೂರ್ಣ

ಭದ್ರಾ ನಾಲಾ ಕಾಮಗಾರಿ ಕುರಿತಂತೆ ಇನ್ನೂ ಸಮೀಕ್ಷೆ ಕಾರ್ಯ ನಡೆಯುತ್ತಿದೆ. 151 ಕಿ.ಮೀ. ಉದ್ದದ ನಾಲಾ ಕಾರ್ಯದಲ್ಲಿ ಕೆಲವೆಡೆ ಇನ್ನೂ ಭೂಸ್ವಾಧೀನ ಕಾರ್ಯ ಪ್ರಕ್ರಿಯೆ ನಡೆಯುತ್ತಿದೆ. ಕೆಲವೆಡೆ ಟೆಂಡರ್ ಹಂತದಲ್ಲಿದೆ. ಯೋಜನಾ ಕಾಮಗಾರಿಯ ನಿಗದಿತ ಗುರಿಯಂತೆ 2016ಕ್ಕೆ ಆಗಬೇಕು. ಆದರೆ, 2020ರ ವೇಳೆಗೆ ಕಾಮಗಾರಿ ಪೂರ್ಣವಾಗುವ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ ಎಂದು ಭ್ರುಾ ಮೇ್ದುಂಡೆ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್ ಸಭೆಯಲ್ಲಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry