ಯೋಜನೆ ಜನರಿಗೆ ತಲುಪಲಿ

7

ಯೋಜನೆ ಜನರಿಗೆ ತಲುಪಲಿ

Published:
Updated:

ಕಾಪು (ಪಡುಬಿದ್ರಿ): `ಪಕ್ಷ ಬಲಿಷ್ಠವಾಗಬೇಕಾದರೆ ಕಾರ್ಯಕರ್ತರ ಪರಿಶ್ರಮ ಅತೀ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ಯುಪಿಎ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು~ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.ಭಾನುವಾರ ಕಾಪುವಿನ ರಾಜೀವ್ ಭವನದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. `ಯುಪಿಎ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳನ್ನು ಸಮಪರ್ಕಕವಾಗಿ ಜನರು ಬಳಸುವಂತಾಗಬೇಕು. ಪ್ರತಿ ಗ್ರಾಮದ ಜನರಿಗೆ,ಅಸಹಾಯಕರಿಗೆ, ಅಸಂಘಟಿತ ವಲಯದ ಕಾರ್ಮಿಕರಿಗೆ, ಕಡುಬಡವರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ತಲುಪುತ್ತಿವೆ ಎಂಬ ಮಾಹಿತಿ ಪಡೆದುಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಕೆಯಾಗದಿದ್ದಲ್ಲಿ ಈ ವೇಳೆ ಅವರಿಗೆ ತಲುಪಿಸುವ ಕಾರ್ಯ ಮಾಡಬೇಕಾದುದು ಅತೀ ಅಗತ್ಯ~ ಎಂದರು.ಇಂದು ದೇಶದ ಅದೆಷ್ಟೋ ಮಂದಿ ರೇಷನ್ ಕಾರ್ಡ್ ಇಲ್ಲದೆ ಜೀವನ ನಡೆಸುತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಂದಿನ ದಿನ ಸುದಿನ, ನಾಳೆಯ ದಿನ ಕಠಿಣ. ಈ ಧ್ಯೇಯಯೊಂದಿಗೆ ಕಾರ್ಯಕರ್ತರು ಇಂದೇ ಪಕ್ಷದ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry