ಗುರುವಾರ , ಮೇ 13, 2021
16 °C

ಯೋಜನೆ ರದ್ದು ಪಡಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಜಿಲ್ಲೆಯ 16 ಹೋಬಳಿ ಪ್ರದೇಶ ವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ ರುವುದರ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೂರಾರು ಕಾರ್ಯ ಕರ್ತರು ಹಾಗೂ ಬೆಳೆಗಾರರು ಪರಿಸರ ಸೂಕ್ಷ್ಮ ವಲಯ ಯೋಜನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.  ಪಾಲಿಬೆಟ್ಟ ರಸ್ತೆಯಿಂದ ಬಸ್ ನಿಲ್ದಾಣದ ವರೆಗೆ ಮೆರವಣಿಗೆ ನಡೆಸಿ ಬಳಿಕ  ಬಸ್ ನಿಲ್ದಾಣದ ಸಾರ್ವ ಜನಿಕ ವೇದಿಕೆಯಲ್ಲಿ ಸಭೆ ನಡೆಸಿದರು. ಆರಂಭದಲ್ಲಿ ಮಾತನಾಡಿದ ಬಿ.ಟಿ.ಪ್ರದೀಪ್ ಯೋಜನೆಯನ್ನು ವಿರೋಧಿಸಿ ತಾ.ಪಂ. ಮತ್ತು ಜಿ.ಪಂ.ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ನೂತನ ಅರಣ್ಯ ಸಚಿವ ಯೋಗೇಶ್ವರ್ ಯೋಜನೆಯನ್ನು ಜಾರಿ ಗೊಳಿಸ ಲಾಗುವುದು ಎಂದು ಬೇಜವಾಬ್ದಾರಿ ಹೇಳಿಕೆ ನೀಡಿ ರುವುದು ಖಂಡನೀಯ.

ಪರಿಸರವಾದಿಗಳ ಚಿತಾವಣೆ ಯಿಂದ ಜಿಲ್ಲೆಯ ಜನತೆಗೆ  ಮಾರಕ ವಾದ ಯೋಜನೆ ರೂಪಿಸಲಾಗಿದೆ. ಇವರಿಂದ ಕೊಡಗಿನ ಜನತೆ ಪರಿಸರದ ಬಗ್ಗೆ ಪಾಠ ಕಲಿಯಬೇಕಾಗಿಲ್ಲ ಎಂದರು.ಈ ಯೋಜನೆ ಜಾರಿಗೊಂಡಲ್ಲಿ 10 ಕಿಮೀ ದೂರದ ವರೆಗೆ ರೈತರು ತಮ್ಮ ತೋಟದಲ್ಲಿ ಮರ ಕಡಿಯು ವಂತಿಲ್ಲ. ಸಾಕು ಪ್ರಾಣಿಗಳನ್ನು ಸಾಕುವಂತಿಲ್ಲ. ಅನು ಮತಿ ಇಲ್ಲದೆ ಅರಣ್ಯದ ಒಳಗೆ ಪ್ರವೇಶ ವಿಲ್ಲ. ಇದೀಗ ಾಸಿಸುತ್ತಿರುವ ಕಾಫಿ ತೋಟಗಳನ್ನು ಕಳೆದುಕೊಂಡರು ಆಚ್ಚರಿಪಡಬೆಕಾಗಿಲ್ಲ ಎಂದರು.ಹಿಂದಿನ ಚುನಾವಣೆಯ ಸಂದರ್ಭ ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 48 ಗಂಟೆಗಳಲ್ಲಿ ಜನರ ಸಮಸ್ಯೆ ನಿವಾರಣೆ ಮಾಡುವುದಾಗಿ ಭರವಸೆ  ನೀಡಿದ್ದ ಕೆ.ಜಿ. ಬೋಪಯ್ಯ ಎಲ್ಲಿದ್ದಾರೆ ಎಂದು  ಪ್ರಶ್ನಿಸಿದರು.ಬೋಪಯ್ಯ ನವರಿಗೆ ಅವರದೇ  ಸರ್ಕಾರವ್ದ್ದಿದು ಉನ್ನತ ಸ್ಥಾನದಲ್ಲಿ ಇದ್ದರೂ ಈ ಸಮಸ್ಯೆಯನ್ನು ಪರಿಹ ರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಅರಣ್ಯ ಸಚಿವರಿಗೆ ಮಂಡ್ಯಜಿಲ್ಲೆಯ ಹಿತ ಮಾತ್ರ ಕಾಣುತ್ತಿದೆ. ಕೊಡಗಿನ  ಅಭಿ ವೃದ್ಧಿಗೆ ಕೋಟಿ ಗಟ್ಟಲೆ ಹಣ ತಂದಿ ದೇವೆ ಎಂದು  ಬಿಜೆಪಿ ನಾಯಕರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ.  ಜಿಲ್ಲೆಯ ಯಾವುದೇ ಭಾಗದಲ್ಲಿ ಸಂಚರಿಸಿದರೂ ರಸ್ತೆ ತೀರ ಶೋಚನೀಯವಾಗಿದೆ. ಹಾಗಾದರೆ  ಕೋಟಿ ಗಟ್ಟಲೆ  ಹಣ ಎಲ್ಲಿಗೆ ಹೋಯಿತು  ಎಂದು ಕಿಡಿ ಕಾರಿದರು. ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್,  ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ  ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ, ಪೊನ್ನಂಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಜಿ.ಪಂ. ಸದಸ್ಯರಾದ ಸರಿತಾ ಪೂಣಚ್ಚ, ಬಿ.ಎನ್. ಪೃಥ್ಯು, ವೆಂಕಟೇಶ್, ಮೂಕಳೇರ ಕುಶಾಲಪ್ಪ, ತಾ.ಪಂ.ಸದಸ್ಯರಾದ ಟಾಟುಮೊಣ್ಣಪ್ಪ, ಹಬೀಬುನ್ನೀಸ, ಕಿರುಗೂರು ಗ್ರಾ.ಪಂ. ಸದಸ್ಯ ಸರಾ ಚಂಗಪ್ಪ, ಕಳ್ಳಿಚಂಡ ನಂಜಪ್ಪ, ಪೆಮ್ಮಂಡ ಪೊನ್ನಪ್ಪ,ಬೇಬಿ  ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.