ಶನಿವಾರ, ಮೇ 28, 2022
21 °C

ಯೋಜನೆ ಲಾಭ ಪಡೆಯಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ತಮ್ಮ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಯೋಜನೆ ಹಿರಿಯೂರು ತಾಲ್ಲೂಕಿಗೆ ಬಂದಿರುವುದು ಸಂತಸದ ವಿಚಾರ. ಸ್ಥಳೀಯ ಸಂಪನ್ಮೂಲ ಕ್ರೋಡೀಕರಿಸಿ, ನಿರುದ್ಯೋಗಿಗಳಿಗೆ ಆಸರೆ ಆಗುವ ಸದರಿ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಬೇಕು ಎಂದು ಉಪನ್ಯಾಸಕ ಜಗದೀಶ್ ದರೇದಾರ್ ಕರೆ ನೀಡಿದರು.ನಗರದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಇದೊಂದು ಮಹತ್ತರ ಕಾರ್ಯಕ್ರಮ ಆಗಿರುವ ಕಾರಣ ಶ್ರೀಕ್ಷೇತ್ರದ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಶ್ರೀಕ್ಷೇತ್ರಕ್ಕೆ ಭಕ್ತರಿಂದ ಬರುವ ನೆರವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಸೌಲಭ್ಯ ವಂಚಿತರಿಗೆ ನೀಡುವ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾದುದು. ವೀರೇಂದ್ರ ಹೆಗ್ಗಡೆ ಅವರು ಕಂಡಿರುವ ಸಮಾಜದ ಅಭಿವೃದ್ಧಿಯ ಕನಸನ್ನು ಎಲ್ಲರೂ ಸೇರಿ ನನಸಾಗಿಸೋಣ ಎಂದರು.ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜನಾರ್ದನ್ ನಾಯಕ್ ಅವರು ಯೋಜನೆಯ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು.ಪುರಸಭಾ ಸದಸ್ಯ ಸಿಗ್‌ಬತ್‌ವುಲ್ಲಾ, ಡಿ. ಗಂಗಾಧರ್, ವಿಜಯಮ್ಮ, ಪಿ. ಶಶಿಕಲಾ, ಡಿ.ಬಿ. ಲಲಿತಾ, ಲಲಿತಾ ಆಚಾರ್ಯ ಮತ್ತಿತರರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.