ಸೋಮವಾರ, ಮೇ 17, 2021
31 °C

ಯೋಜನೆ ಸದುಪಯೋಗಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ: ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಹಮ್ಮಿಕೊಂಡಿರುವ ಹಲವಾರು ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ಮಕ್ಕಳು ಉತ್ತಮ ಪ್ರಗತಿ ಸಾಧಿಸಬೇಕು ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ  ಹೇಳಿದರು.ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಉರ್ದು ಪ್ರಾಥಮಿಕ ಶಾಲಾ ತಾಲೀಮಿ (ಪ್ರತಿಭಾ ಕಾರಂಜಿ) ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಉರ್ದು ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಿಂದ ಶೀಘ್ರ ಪ್ರೌಢಶಾಲೆಗೆ ಏರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರ ಹಿಂದುಳಿದ ಈ ಜನಾಂಗದ ಅಭಿವೃದ್ಧಿ ಸಾಕಷ್ಟು ಶ್ರಮಿಸುತ್ತಿದ್ದು, ಪಾಲಕ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸದೆ ತಪ್ಪದೇ ಶಾಲೆಗೆ ಕಳುಹಿಸಿ ಉತ್ತಮ ನಾಗರಿಕರನ್ನಾಗಿಸಬೇಕು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೆ ಎಲ್ಲರೂ ಸಹಕಾರ ನೀಡಬೇಕೆಂದು ತಿಳಿಸಿದರು.ಹೊಸಪೇಟೆ ವಿಜಯನಗರ ಕಾಲೇಜಿನ ಉಪನ್ಯಾಸಕ ಡಾ.ಪಿ.ಫಯಿಮುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿ, ಉರ್ದು ಭಾಷೆ ಕಲಿಯುತ್ತಿರುವ ಮಕ್ಕಳಿಗೆ ಇಲ್ಲಿ ಏಳನೇ ತರಗತಿವರೆಗೆ ಮಾತ್ರ ಇರುವದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಹೊಸಪೇಟೆಗೆ ತೆರಳ ಬೇಕಾದ ಅನಿವಾರ್ಯತೆ ಇದ್ದು, ಮಕ್ಕಳ ಸಂಖ್ಯೆಯೂ ಹೆಚ್ಚು ಇರುವುದರಿಂದ ಪಾಲಕರು ಅವರ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ.

 

ಈ ನಿಟ್ಟಿನಲ್ಲಿ ಈ ಶಾಲೆಯನ್ನು ಪ್ರೌಢಶಾಲಾ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರ್ಗದಪ್ಪ ಮಾತನಾಡಿದರು.ಎಸ್‌ಡಿಎಂಸಿ ಅಧ್ಯಕ್ಷ ಯೂನಸ್ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಉರ್ದು ಟೀಚರ್ಸ್‌ ಕೌನ್ಸಿಲ್‌ನ ಅಧ್ಯಕ್ಷ ಷಬ್ಬೀರ್ ಅಹ್ಮದ್, ಈಸಿಒ ಮೆಹಬೂಬ್ ಮೊಹಿದ್ದೀನ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಾಲಸ್ವಾಮಿ ದೇಶಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿ.ಎಸ್.ಮಂಜುಳಬಾಯಿ, ಉಪಾಧ್ಯಕ್ಷೆ ಮಂಜುಳ ವಿಜಯಕುಮಾರ್, ಜಿ.ಪಂ. ಸದಸ್ಯೆ ತಿಪ್ಪಿಬಾಯಿ ಠಾಕ್ರಾನಾಯ್ಕ,ತಾ.ಪಂ. ಸದಸ್ಯ ಯು.ಸೋಮಪ್ಪ, ಮಾಜಿ ತಾ.ಪಂ. ಅಧ್ಯಕ್ಷ ಪಿ.ಓಬಪ್ಪ, ನಿವೃತ್ತ ದೈಹಿಕ ಶಿಕ್ಷಕ ಪಿ.ಕಾಸಿಂ ಸಾಹೇಬ್, ರಂಜಾನ್ ಸಾಬ್, ಮುಲ್ಲಾ ಷರೀಫ್‌ಸಾಬ್, ಗ್ರಾ.ಪಂ.ಸದಸ್ಯರಾದ ಪಿ.ಪೀರಾಸಾಬ್, ಸುಭಾನ್, ರಾಜಾಭಕ್ಷಿ, ಕೆ.ಸುಭಾನ್, ಸೋಮಪ್ಪ, ನಾಗೇಶ್, ದುರುಗಪ್ಪ, ರಷೀದಾ ಬೇಗಂ, ಟಿ.ಎ.ಮೆಹಬೂಬ್ ಬಾಷ, ಎ.ಕಾಸಿಂಸಾಬ್, ರೆಡ್ಡಿ ಮಕ್ಬೂಲ್‌ಸಾಬ್, ವಿರೇಶ್‌ಸ್ವಾಮಿ, ಡಿ.ರಾಘವೇಂದ್ರ ಶೆಟ್ಟಿ, ಎಂ.ಬದರೀನಾಥ ಶೆಟ್ಟಿ, ಮೊಹಿದ್ದೀನ್ ಸಾಬ್ ಇತರರು ಉಪಸ್ಥಿತರಿದ್ದರು. ಕುಂಚೂರು ಕಲೀಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕಿನ ವಿವಿಧ ಉರ್ದು ಶಾಲಾ ಮಕ್ಕಳಿಂದ ಏಕಪಾತ್ರಭಿನಯ, ಹಾಡು, ಸಮೂಹನೃತ್ಯ, ಭಾಷಣ ಇತರೆ ಕಾರ್ಯಕ್ರಮಗಳು ಜರುಗಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.