ಯೋಧನ ಹೊಟ್ಟೆಯಲ್ಲಿತ್ತು ಬಾಂಬ್

7

ಯೋಧನ ಹೊಟ್ಟೆಯಲ್ಲಿತ್ತು ಬಾಂಬ್

Published:
Updated:
ಯೋಧನ ಹೊಟ್ಟೆಯಲ್ಲಿತ್ತು ಬಾಂಬ್

ರಾಂಚಿ ( ಐಎಎನ್‌ಎಸ್): ಮೃತ ಸಿಆರ್‌ಪಿಎಫ್ ಯೋಧನ ಹೊಟ್ಟೆಯಲ್ಲಿ ತ್ತು ಟೈಂ ಬಾಂಬ್...ಹೌದು... ಕಳೆದ ಎರಡು ದಿನಗಳ ಹಿಂದೆ ಲಾಥೆಹಾರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿ 11 ಯೋಧರನ್ನು ಹತ್ಯೆ ಮಾಡಿದ್ದರು.ಬುಧವಾರ ನಾಲ್ವರು ಯೋಧರ ಮೃತ ದೇಹಗಳು ಪತ್ತೆಯಾಗಿದ್ದವು. ಆ ದೇಹಗಳನ್ನು ಇಲ್ಲಿನ ರಾಜೇಂದ್ರ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ರವಾನಿಸಲಾಗಿತ್ತು.ಮೃತ ದೇಹಗಳ ಪರೀಕ್ಷೆಗೆ ಮುಂದಾದ ವೈದ್ಯರಿಗೆ ಅಚ್ಚರಿ ಕಾದಿತ್ತು. ಯೋಧನ ಹೊಟ್ಟೆಯೊಳಗೆ ಅಳವಡಿಸಿದ್ದ ಬಾಂಬಿನ ಟೈಮರ್ ಸದ್ದು ಮಾಡುತ್ತಿತ್ತು. ಕೂಡಲೇ ಬಾಂಬ್ ನಿಷ್ಕ್ರೀಯ ದಳವನ್ನು ಕರೆಸಿ ಜೀವಂತ ಬಾಂಬ್ ಅನ್ನು ನಿಷ್ಕ್ರೀಯ ಗೊಳಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry