ಯೋಧರಿಗೆ ವಿಶೇಷ ಮೆನು, ರಿಯಾಯಿತಿ

7

ಯೋಧರಿಗೆ ವಿಶೇಷ ಮೆನು, ರಿಯಾಯಿತಿ

Published:
Updated:
ಯೋಧರಿಗೆ ವಿಶೇಷ ಮೆನು, ರಿಯಾಯಿತಿ

ಐಟಿಸಿ ವಿಂಡ್ಸರ್ ಹೋಟೆಲ್ ಗಣರಾಜ್ಯೋತ್ಸವದ ಅಂಗವಾಗಿ ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುತ್ತಿರುವ ಯೋಧರಿಗೆ ಜ.26ರಂದು ವಿಶೇಷ ರಿಯಾಯಿತಿ ಪ್ರಕಟಿಸಿದೆ. ಶನಿವಾರದಂದು ಐಟಿಸಿ ವಿಂಡ್ಸರ್‌ನಲ್ಲಿರುವ ರೆಸ್ಟೋರೆಂಟ್‌ಗಳಿಗೆ ಬಂದು ಊಟ ಸವಿಯುವ ಯೋಧರಿಗೆಲ್ಲಾ ಶೇ 50 ರಿಯಾಯಿತಿ ಸಿಗಲಿದೆ. ಭೂ ಸೇನೆ, ವಾಯು ಸೇನೆ, ನೌಕಾ ಸೇನೆ, ಸಶಸ್ತ್ರ ಮೀಸಲು ಪಡೆ, ಬಾರ್ಡರ್ ಸೆಕ್ಯುರಿಟಿ ಪೋರ್ಸ್ ಜತೆಗೆ ರಕ್ಷಣಾ ವಿಭಾಗದ ನಾನಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರೆಲ್ಲಾ ಈ ರಿಯಾಯಿತಿ ಪಡೆದುಕೊಳ್ಳಬಹುದು.ಗಣರಾಜ್ಯೋತ್ಸವ ದಿನದಂದು ದೇಶದ ವಿವಿಧೆಡೆಯ ರುಚಿಕರ ಆಹಾರವನ್ನು ಉಣಬಡಿಸಲಿರುವ ರಾಜ್ ಪೆವಿಲಿಯನ್‌ನ ಬಾಣಸಿಗರು ಗಣರಾಜ್ಯೋತ್ಸವಕ್ಕೆಂದೇ ವಿಶೇಷ ಮೆನು ಕೂಡ ಸಿದ್ಧಪಡಿಸಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ನಮ್ಮೆನ್ನೆಲ್ಲಾ ಸುರಕ್ಷಿತವಾಗಿರಿಸಿರುವ ಯೋಧರಿಗೆ ಗಣರಾಜ್ಯೋತ್ಸವದಂದು ಗೌರವ ಸಲ್ಲಿಸುವುದರ ಜತೆಗೆ ಆ ದಿನದಂದು ಅವರೆನ್ನೆಲ್ಲಾ ಖುಷಿಯಾಗಿಡಬೇಕು ಎಂಬ ಆಶಯದಿಂದ ಈ ರಿಯಾಯಿತಿ ಪ್ರಕಟಿಸಿರುವುದಾಗಿ ವಿಂಡ್ಸರ್ ಹೇಳಿಕೊಂಡಿದೆ.ಐದು ಬಗೆಯ ರೋಸ್ಟೆಡ್ ಚಿಕನ್ ಖಾದ್ಯಗಳು, ಕಕೋರಿ ಕಬಾಬ್, ಬಿರಿಯಾನಿ, ಮುರ್ಘ್ ಟಿಕ್ಕಾ ಮಕಾನಿ ಹಾಗೂ ಮೊದಲಾದ ಸ್ವಾದಿಷ್ಟ ತಿನಿಸುಗಳಲ್ಲದೆ ಆಫ್ಘಾನಿಸ್ತಾನದ ರಾಯಲ್ ತಿನಿಸುಗಳಾದ ಸಿಕಂದ್ರಿ ರಾನ್, ತಂದೂರಿ ಜಿಂಗಾ ಮೊದಲಾದುವೂ ಅಂದು ಲಭ್ಯ.ವಿಂಡ್ಸರ್‌ನಲ್ಲಿರುವ ದಕ್ಷಿಣ್ ರೆಸ್ಟೋರಾ ಕೂಡ ಗಣರಾಜ್ಯೋತ್ಸವದ ಆತಿಥ್ಯಕ್ಕೆ ಸಜ್ಜಾಗಿದೆ. ದಕ್ಷಿಣದ ಖಾದ್ಯಗಳನ್ನು ಸವಿಯುವರಿಗಾಗಿ ತರಹೇವಾರಿ ಮೀನಿನ ಖಾದ್ಯಗಳು, ಮಾಂಸದ ಸಾರು, ಕೋಳಿ ಖಾದ್ಯಗಳನ್ನು ಕರ್ನಾಟಕಿ ಸಂಗೀತವನ್ನು ಕೇಳುತ್ತಾ ತಿನಿಸುಗಳ ರುಚಿಯನ್ನು ಹೀರಬಹುದು.ಈ ರಿಯಾಯಿತಿ ಮಧ್ಯಾಹ್ನ ಮತ್ತು ರಾತ್ರಿಯ ಭೋಜನಕ್ಕೆ ಸೀಮಿತ. ಮಾಹಿತಿ ಮತ್ತು ಟೇಬಲ್ ಬುಕಿಂಗ್‌ಗಾಗಿ: 080 4140 1205.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry