ಯೋಧರ ಬರ್ಬರ ಹತ್ಯೆ: ವಿಶ್ವ ಸಂಸ್ಥೆ ತನಿಖೆಯ ಪಾಕ್ ಪ್ರಸ್ತಾವಕ್ಕೆ ಭಾರತ ನಕಾರ

7

ಯೋಧರ ಬರ್ಬರ ಹತ್ಯೆ: ವಿಶ್ವ ಸಂಸ್ಥೆ ತನಿಖೆಯ ಪಾಕ್ ಪ್ರಸ್ತಾವಕ್ಕೆ ಭಾರತ ನಕಾರ

Published:
Updated:
ಯೋಧರ ಬರ್ಬರ ಹತ್ಯೆ: ವಿಶ್ವ ಸಂಸ್ಥೆ ತನಿಖೆಯ ಪಾಕ್ ಪ್ರಸ್ತಾವಕ್ಕೆ ಭಾರತ ನಕಾರ

ನವದೆಹಲಿ (ಪಿಟಿಐ): ಭಾರತದ ಇಬ್ಬರು ಯೋಧರನ್ನು ಗಡಿ ನಿಯಂತ್ರಣ ರೇಖೆಯಲ್ಲಿ ಬರ್ಬರವಾಗಿ ಹತ್ಯೆಗೈದ ಕೃತ್ಯವನ್ನು ವಿಶ್ವಸಂಸ್ಥೆ ನೇತೃತ್ವದಲ್ಲಿ ತನಿಖೆ ನಡೆಸುವ ಪಾಕಿಸ್ತಾನದ ಪ್ರಸ್ತಾವವನ್ನು ಭಾರತ ಗುರುವಾರ ಸಾರಾಸಾಗಟಾಗಿ ತಳ್ಳಿಹಾಕಿದೆ.'ಪಾಕಿಸ್ತಾನದ ಸಲಹೆಯನ್ನು ಸಾರಾಸಗಟು ತಿರಸ್ಕರಿಸಲಾಗಿದೆ. ನಾವು  ವಿಷಯವನ್ನು ಅಂತರರಾಷ್ಟ್ರೀಯ ವಿಷಯವನ್ನಾಗಿ ಮಾಡುವುದಿಲ್ಲ ಅಥವಾ ವಿಶ್ವಸಂಸ್ಥೆಗೆ ಹೋಗುವುದೂ ಇಲ್ಲ' ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

'ಯೋಧನನ್ನು ಕೊಂದು ಶಿರಚ್ಛೇದ ಮಾಡಿದ್ದು ಒಂದು ಬರ್ಬರ ಘಟನೆ' ಎಂದು ಅವರು ನುಡಿದರು.ಭಾರತೀಯ ಯೋಧರ ಶಿಬಿರದ ಮೇಲೆ ದಾಳಿ ನಡೆಸಿದ ಪಾಕ್ ಸೈನಿಕರು ಇಬ್ಬರು ಸೈನಿಕರನ್ನು ಬರ್ಬರವಾಗಿ ಕೊಲೆಗೈದು ಶಿರಚ್ಛೇದ ಮಾಡಿದ್ದಲ್ಲದೆ ಒಬ್ಬ ಯೋಧನ ಶಿರವನ್ನು ಕೊಂಡೊಯ್ದಿದ್ದರು.ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯಲ್ಲಿ (ಸಿಸಿಎಸ್) ಪಾಕಿಸ್ತಾನದ ಪ್ರಸ್ತಾವ ಈದಿನ ಚರ್ಚೆಗೆ ಬಂದಿತು ಎಂದು ಚಿದಂಬರಂ ಹೇಳಿದರು.ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಜನವರಿ 8ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಿಭಾಗದಲ್ಲಿ ಸಂಭವಿಸಿದ ಘಟನೆ ಮತ್ತು ನಂತರದ ವಿದ್ಯಮಾನಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry