ಭಾನುವಾರ, ನವೆಂಬರ್ 17, 2019
20 °C

ರಂಗದಲ್ಲಿ `ಮಲೆಗಳಲ್ಲಿ ಮದುಮಗಳು'

Published:
Updated:

ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು' ಕಾದಂಬರಿಯ ರಂಗಪ್ರಯೋಗಕ್ಕೆ ಇಂದು (ಏ.18) ಚಾಲನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಜ್ಞಾನಭಾರತಿ ಆವರಣದಲ್ಲಿರುವ ಕರ್ನಾಟಕ ಕಲಾಗ್ರಾಮದಲ್ಲಿ (ಮೇ 30ರವರೆಗೆ) ಈ ನಾಟಕ ಪ್ರತಿ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ರಾತ್ರಿ 8.30ರಿಂದ 5.30ರ ವರೆಗೆ 9 ಗಂಟೆಗಳ ಕಾಲ ಕಲಾಗ್ರಾಮದ ನಾಲ್ಕು ವೇದಿಕೆಗಳಲ್ಲಿ ಪ್ರದರ್ಶನಗೊಳ್ಳಲಿದೆ.ನಿರ್ದೇಶನ: ಸಿ. ಬಸವಲಿಂಗಯ್ಯ. ರಂಗರೂಪ: ಕೆ.ವೈ. ನಾರಾಯಣಸ್ವಾಮಿ. ರಂಗವಿನ್ಯಾಸ: ಶಶಿಧರ ಅಡಪ. ವಸ್ತ್ರ ಮತ್ತು ಪರಿಕರ ವಿನ್ಯಾಸ: ಪ್ರಮೋದ್ ಶಿಗ್ಗಾಂವ್. ಮುಖವರ್ಣಿಕೆ: ರಾಮಕೃಷ್ಣ ಬೆಳ್ತೂರ್. ಬೆಳಕಿನ ವಿನ್ಯಾಸ: ಪರೇಶ್ ಕುಮಾರ್. ಸಂಗೀತ: ಹಂಸಲೇಖ.

ಟಿಕೆಟ್ ದರ ರೂ.100. ಟಿಕೆಟ್‌ಗಳು ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನ ಮತ್ತು ಭಗವಾನ್ ಮಹಾವೀರ (ಇನ್‌ಫೆಂಟ್ರಿ) ರಸ್ತೆಯಲ್ಲಿರುವ ವಾರ್ತಾ ಸೌಧ ಹಾಗೂ ಮಲ್ಲತ್ತಹಳ್ಳಿಯ ಕರ್ನಾಟಕ ಕಲಾಗ್ರಾಮದಲ್ಲಿ ದೊರೆಯುತ್ತವೆ. www.bookmyshow.com ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಬಹುದು.ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 98865 40966, ದೂರವಾಣಿ ಸಂಖ್ಯೆ 080- 2221 2582 ನ್ನು ಸಂಪರ್ಕಿಸಬಹುದು ಇಲ್ಲವೆ ಫೇಸ್‌ಬುಕ್ www.facebook.com/malegalalli.madhumagaluಗೆ ಭೇಟಿ ನೀಡಿ ಅಥವಾ ​alegalallimadhumagalu@ gmail.com ಗೆ ಮೇಲ್ ಮಾಡುವ ಮೂಲಕ ಪಡೆದುಕೊಳ್ಳಬಹುದು.

ಪ್ರತಿಕ್ರಿಯಿಸಿ (+)