ಭಾನುವಾರ, ಮೇ 16, 2021
28 °C

ರಂಗನತಿಟ್ಟಿನಲ್ಲಿ ಮೊಸಳೆಗಳ ವೈಯ್ಯಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ:  ಕಾವೇರಿ ನದಿಯಲ್ಲಿ ನೀರು ಗಣನೀಯವಾಗಿ ಕಡಿಮೆ ಆಗಿರುವುದರಿಂದ ತಾಲ್ಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಮೊಸಳೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ.  ಪಕ್ಷಿಧಾಮದಲ್ಲಿ ಮಾರ್ಷ್ ಜಾತಿಯ ಸುಮಾರು 70 ಮೊಸಳೆಗಳಿವೆ. ಬಿಸಿಲು ಏರುತ್ತಿದ್ದಂತೆ ಇವು ಬಂಡೆಗಳ ಮೇಲೇರಿ ಮಲಗುತ್ತವೆ. ಮತ್ತೆ ಕೆಲವು ಮರಗಳ ನೆರಳಿನಲ್ಲಿ, ಮರಳಿನ ಮಲೆ ವಿಶ್ರಮಿಸುವುದು ಇಲ್ಲಿ ಸಾಮಾನ್ಯ ದೃಶ್ಯ. ಪಕ್ಷಿ ವೀಕ್ಷಕರನ್ನು ಹೊತ್ತ ದೋಣಿ ಪಕ್ಕದಲ್ಲೇ ಸಾಗಿದರೂ ಈ ಮೊಸಳೆಗಳು ಅಲುಗಾಡುವುದಿಲ್ಲ.

 

ತೀರಾ ಸಿನಿಹಕ್ಕೆ ಹೋದರೆ ಬುಸ್ಸ್ ... ಗುಡತ್ತ ನೀರಿಗೆ ಧುಮುಕುತ್ತವೆ. ನೀರಿನಲ್ಲಿ ನಿಧಾನಕ್ಕೆ ತೇಲುತ್ತ ಸಾಗುವ ದೃಶ್ಯ ಸೊಗಸಾಗಿರುತ್ತದೆ. ವಯಸ್ಕ ಮೊಸಳೆಗಳು ಅಷ್ಟೇ ಅಲ್ಲದೆ ಸೋರೆಕಾಯಿ ಗಾತ್ರದ ಮರಿಗಳು ಕೂಡ ಅಲ್ಲಲ್ಲಿ ಕಾಣ ಸಿಗುತ್ತವೆ.  ಪಕ್ಷಿಧಾಮದಲ್ಲಿ ಮೀನುಗಳು ಸಮೃದ್ಧವಾಗಿರುವುದರಿಂದ ಮೊಸಳೆಗಳ ಸಂತತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ಒಂದು ಮೊಸಳೆ ಒಂದು ಬಾರಿಗೆ 20ರಿಂದ 25 ಮೊಟ್ಟೆಗಳನ್ನು ಇಡುತ್ತದೆ. ಆದರೆ ಆ ಮೊಟ್ಟೆಗಳನ್ನು ತಾಯಿ ಮೊಸಳೆ ತಾನೇ ತಿನ್ನುತ್ತದೆ. ಅಳಿದುಳಿದ ಮೂರ‌್ನಾಲ್ಕು ಮೊಟ್ಟೆಗಳು ಮಾತ್ರ ಮರಿಯಾಗುತ್ತವೆ ಎಂದು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಆನಂದ್ ಹೇಳುತ್ತಾರೆ.ನದಿಯಲ್ಲಿ ಪ್ರವಾಹ ಉಂಟಾದಾಗ, ಜೋರು ಗಾಳಿ ಬೀಸಿದಾಗ ನೀರಿಗೆ ಬೀಳುವ ಪಕ್ಷಿಗಳ ಮರಿಗಳು ಮತ್ತು ಮೊಟ್ಟೆಗಳನ್ನು ಕೂಡ ಈ ಮೊಸಳೆಗಳು ಭಕ್ಷಿಸುತ್ತವೆ. ನದಿಯಲ್ಲಿ ಹೆಚ್ಚು ನೀರು ಇದ್ದಾಗ ಮೊಸಳೆಗಳು ಅಷ್ಟಾಗಿ ಕಣ್ಣಿಗೆ ಬೀಳುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.