ರಂಗನಾಥಸ್ವಾಮಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ

7

ರಂಗನಾಥಸ್ವಾಮಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ

Published:
Updated:

ಹಿರಿಯೂರು: ಎರಡು ವರ್ಷದ ಹಿಂದೆ ಗ್ರಾಮಸ್ಥರಿಗೆ ಭರವಸೆ ನೀಡಿದಂತೆ ರಂಗನಾಥಸ್ವಾಮಿ ಸಮುದಾಯ ಭವನಕ್ಕೆ ್ಙ 30 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಡಿ. ಸುಧಾಕರ್ ತಿಳಿಸಿದರು.ತಾಲ್ಲೂಕಿನ ಕಳವಿಬಾಗಿ ಗ್ರಾಮದಲ್ಲಿ ಈಚೆಗೆ ್ಙ 30 ಲಕ್ಷ ವೆಚ್ಚದಲ್ಲಿ ರಂಗನಾಥಸ್ವಾಮಿ ಸಮುದಾಯಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಮೂರು ವರ್ಷದಲ್ಲಿ ನಾನು ಹಾಕಿಕೊಂಡಿದ್ದ ಯೋಜನೆಗಳನ್ನು ಬಹುತೇಕ ಮುಗಿಸಿದ್ದೇನೆ. ಮುಂದಿನ ಮೂರ‌್ನಾಲ್ಕು ತಿಂಗಳಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ. ಮತದಾರರಿಗೆ ಎಂದೂ ನಿರಾಸೆ ಮಾಡಿಲ್ಲ. ಬಡವರು, ದಲಿತರಿಗೆ ವಿಶೇಷವಾಗಿ ನೆರವು ನೀಡಿದ್ದೇನೆ. ಟೀಕೆ ಮಾಡುವವರು ಇದ್ದರೆ ಮಾತ್ರ ಜನಪ್ರತಿನಿಧಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ತಿಳಿಸಿದರು.ಗ್ರಾಮಕ್ಕೆ ದೇವಸ್ಥಾನದ ರಸ್ತೆ ಹಾಗೂ ಕುಡಿಯುವ ನೀರು ಪೂರೈಕೆಗೆ ಓವರ್‌ಹೆಡ್ ಟ್ಯಾಂಕ್ ಅನ್ನು ಶೀಘ್ರವೇ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಿ. ಯಶೋಧರ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಆರ್. ದೇವೇಂದ್ರಪ್ಪ, ರಾಮಣ್ಣ, ಕಂದಿಕೆರೆ ಸುರೇಶ್‌ಬಾಬು, ರಾಘವೇಂದ್ರರೆಡ್ಡಿ, ಈರಲಿಂಗೇಗೌಡ, ಮಹಾಂತೇಶ್, ತಮ್ಮಣ್ಣ, ಮಾರೇನಹಳ್ಳಿ ಶಿವಣ್ಣ ಮತ್ತಿತರರು ಹಾಜರಿದ್ದರು.ಸ್ವಯಂಘೋಷಿತ ಆಸ್ತಿ ತೆರಿಗೆ ಸಂಗ್ರಹ


ಹಿರಿಯೂರು: ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಂತೆ ಜನವರಿ ಅಂತ್ಯಕ್ಕೆ ್ಙ 52.35 ಲಕ್ಷ ಸಂಗ್ರಹವಾಗಿದೆ. ್ಙ 36 ಲಕ್ಷ ಬಾಕಿ, ಬರುವ ಮಾರ್ಚ್ ಒಳಗೆ ಕನಿಷ್ಟ ್ಙ 18 ಲಕ್ಷ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.ನೀರಿನ ತೆರಿಗೆ ಜನವರಿ ಅಂತ್ಯಕ್ಕೆ ್ಙ 29 ಲಕ್ಷ ವಸೂಲಿಯಾಗಿದ್ದು, ್ಙ 18 ಲಕ್ಷ ಬಾಕಿ ಇದೆ. ಮಳಿಗೆ ಕಂದಾಯ ಶೇ. 93ರಷ್ಟು ವಸೂಲಿ ಆಗಿದೆ. ನಾಗರಿಕರು ತಮ್ಮ ಜವಾಬ್ದಾರಿ ಅರಿತು ನೀರಿನ ಹಾಗೂ ಮನೆಗಂದಾಯ ಪಾವತಿ ಮಾಡಿದರೆ ನಗರದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲು ಸಹಕಾರಿ ಆಗುತ್ತದೆ.ವಸೂಲಾತಿಯನ್ನು ಬಿಗಿಗೊಳಿಸಲು ಕಂದಾಯ ವಿಭಾಗದ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.ಕೆಎಂಆರ್‌ಪಿ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿನವರಿಗೆ 500 ಶೌಚಾಲಯ ಮಂಜೂರಾಗಿದ್ದು, ನಿವೇಶನ, ಮನೆಯ ಖಾತೆ ಹೊಂದಿದವರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುವುದು. 100 ಶೌಚಾಲಯಗಳು ಪ್ರಗತಿಯಲ್ಲಿದ್ದು, 400 ಶೌಚಾಲಯ ಬಾಕಿಯಿದ್ದು, ಅರ್ಜಿ ಆಹ್ವಾನಿಸಲಾಗಿದೆ.್ಙ 20,000 ಅಂದಾಜು ವೆಚ್ಚದ ಶೌಚಾಲಯಗಳಿಗೆ ಶೇ. 25ರಷ್ಟು ಹಣವನ್ನು ಸರ್ಕಾರ ನೀಡುತ್ತದೆ. ಉಳಿದ ್ಙ 15 ಸಾವಿರವನ್ನು ಫಲಾನುಭವಿಗಳು 3 ಕಂತುಗಳಲ್ಲಿ ಪ್ರಗತಿಗೆ ಅನುಗುಣವಾಗಿ ತುಂಬಬೇಕು ಎಂದು ಮಂಜುಳಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry