ಬುಧವಾರ, ಜನವರಿ 22, 2020
24 °C

ರಂಗನಾಥ್ ಗೆ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗನಾಥ್ ಗೆ ಬಹುಮಾನ

ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳಲು ಟ್ರಕ್ ಚಾಲಕರಿಗಾಗಿ ಷೆಲ್ ರಿಮುಲಾ ಹಮ್ಮಿಕೊಂಡಿದ್ದ ‘ಮೇರಾ ಹಮ್‌ಸಫರ್‌ ಮೇರಿ ಕಹಾನಿ’ ಸ್ಪರ್ಧೆಯಲ್ಲಿ ನಗರದ ಟ್ರಕ್ ಚಾಲಕ ರಂಗನಾಥ್ ಬಹುಮಾನ ಗೆದ್ದುಕೊಂಡಿದ್ದಾರೆ.

ತಮ್ಮ ದಿನದ ಬಹುಸಮಯವನ್ನು ವಾಹನ ಚಾಲನೆ ಮಾಡುತ್ತ ರಸ್ತೆಯಲ್ಲಿಯೇ ಕಳೆಯುವ ಚಾಲಕರು ಅನೇಕ ಸಂದರ್ಭಗಳನ್ನು ಎದುರಿಸುತ್ತಾರೆ.ಇಂಥ ಅನುಭವವನ್ನು ಕಥೆ ರೂಪದಲ್ಲಿ ಕಟ್ಟಿಕೊಡಿ ಎಂದು ಷೆಲ್ ರಿಮುಲಾ ಚಾಲಕರನ್ನು ಆಹ್ವಾನಿಸಿತ್ತು. ಇದರಲ್ಲಿ ಪಾಲ್ಗೊಂಡಿದ್ದ ರಂಗನಾಥ್ ಅವರು, ವಾಹನ ಕೆಟ್ಟು ದಿಕ್ಕು ತೋಚದೇ ನಿಂತಿದ್ದ ಮದುವೆ ದಿಬ್ಬಣವನ್ನು ತಾವು ಸಕಾಲಕ್ಕೆ ಮದುವೆ ಮಂಟಪಕ್ಕೆ ತಲುಪಿಸಿದ ಪ್ರಸಂಗವನ್ನು ಹಂಚಿಕೊಂಡಿದ್ದರು.

ಪ್ರತಿಕ್ರಿಯಿಸಿ (+)