ರಂಗಪ್ಪನಾಯಕ್ ಅಧ್ಯಕ್ಷ, ವೆಂಕಣ್ಣ ಉಪಾಧ್ಯಕ್ಷ

7

ರಂಗಪ್ಪನಾಯಕ್ ಅಧ್ಯಕ್ಷ, ವೆಂಕಣ್ಣ ಉಪಾಧ್ಯಕ್ಷ

Published:
Updated:

ಸುರಪುರ: 1990ರಲ್ಲಿ ನವೀಕರಣಗೊಂಡ ಅರ್ಬನ್ ಬ್ಯಾಂಕ್ ಜಿಲ್ಲೆಯ ಸಹಕಾರ ಚಳುವಳಿಯಲ್ಲಿ ಮುಂಚೂಣಿಯಲ್ಲಿದೆ. ಸಧ್ಯ ರೂ. 6 ಕೋಟಿ ದುಡಿಯುವ ಬಂಡವಾಳ ಹೊಂದಿರುವ ಬ್ಯಾಂಕ್ `ಬಿ~ ಗ್ರೇಡ್ ಹೊಂದಿದೆ.ದುಡಿಯುವ ಬಂಡವಾಳ ರೂ. 10 ಕೋಟಿ ದಾಟಿದಾಗ `ಎ~ ಗ್ರೇಡ್ ಆಗಿ ಪರಿವರ್ತಿತವಾಗುತ್ತದೆ. ಈ ನಿಟ್ಟಿನಲ್ಲಿ ಯತ್ನಿಸುವುದಾಗಿ ಇಲ್ಲಿನ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನೂತನ ಅಧ್ಯಕ್ಷ ರಾಜಾ ರಂಗಪ್ಪನಾಯಕ್ ಪ್ಯಾಪ್ಲಿ ಭರವಸೆ ನೀಡಿದರು.ಎರಡನೆ ಅವಧಿಗಾಗಿ ಬ್ಯಾಂಕಿನ ಅಧ್ಯಕ್ಷರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದ ನಂತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಬ್ಯಾಂಕಿನ ಸಧ್ಯದ ಶೇರು ಬಂಡವಾಳ ರೂ. 47 ಲಕ್ಷ ಆಗಿದ್ದು ಇದನ್ನು ರೂ. 50 ಲಕ್ಷಕ್ಕೆ ಮುಟ್ಟಿಸಿದರೆ ರಿಜರ್ವ್ ಬ್ಯಾಂಕ್ ಗ್ರಾಹಕರಿಗೆ ಡಿ. ಡಿ. ಫೆಸಿಲಿಟಿ ಒದಗಿಸಲು ಅನುಮತಿ ನೀಡುತ್ತದೆ. ಆಗ ಬ್ಯಾಂಕ್ ಅಪೆಕ್ಸ್ ಬ್ಯಾಂಕ್ ಅಡಿ ನೋಂದಣೆಯಾಗಿ ಇನ್ನಷ್ಟು ಹೆಚ್ಚಿನ ಗ್ರಾಹಕರ ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಗ್ರಾಹಕರ, ಶೇರುದಾರರ ಮತ್ತು ನಿರ್ದೇಶಕರ ಸಹಕಾರ ಅಗತ್ಯ ಎಂದು ನುಡಿದರು.ನಿರ್ದೇಶಕಿ ಚವ್ವಾಲಕ್ಷ್ಮಿ ಪದ್ಮಾವತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅಧ್ಯಕ್ಷ ಸ್ಥಾನಕ್ಕೆ ರಂಗಪ್ಪನಾಯಕ್ ಪ್ಯಾಪ್ಲಿ ಅವರ ಹೆರನ್ನು ಪ್ರಕಾಶ ಸಜ್ಜನ್ ಸೂಚಿಸಿದರು. ಮಾಣಿಕರಾವ ಬೋಡಾ ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಣ್ಣ ಗದ್ವಾಲ್ ಅವರ ಹೆಸರನ್ನು ಖಾಜಾ ಖಲೀಲ ಅಹ್ಮದ್ ಅರಿಕೇರಿ ಸೂಚಿಸಿದರು. ರಾಕೇಶ ಹಂಚಾಟೆ ಅನುಮೋದಿಸಿದರು. ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಹಿಂದಿನ ಅವಧಿಯ ಅಧ್ಯಕ್ಷ ರಾಜಾ ಮುಕುಂದನಾಯಕ್, ಹಿಂದಿನ ಅವಧಿಯ ಉಪಾಧ್ಯಕ್ಷ ರಾಕೇಶ ಹಂಚಾಟೆ, ನೂತನ ಉಪಾಧ್ಯಕ್ಷ ವೆಂಕಣ್ಣ ಗದ್ವಾಲ್ ಮಾತನಾಡಿದರು.ವಿಶೇಷ ಅಹ್ವಾನಿತರಾದ ಪಿಡ್ಡಪ್ಪ ಜಾಲಗಾರ್, ವೆಂಕಟೇಶ ಹೊಸಮನಿ, ಸಿಬ್ಬಂದಿ ವೆಂಕಟೇಶ ಕುಲಕರ್ಣಿ, ಸದಾಶಿವ ಮಿಣಜಗಿ, ಪಾರ್ವತಿ ಇನಾಮದಾರ್, ತಿಪ್ಪಣ್ಣ ಗುತ್ತೇದಾರ್, ನಾಗರಾಜ ಆಲಕೋಡ, ಈರಣ್ಣ ನಾಲವಾರ್, ರಮೇಶ ನಾಡಿಗೇರ್, ಭೀಮಾಶಂಕರ ದೇಶಪಾಂಡೆ, ಶಿವಶರಣಪ್ಪ ಬಡಗಾ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry