ಬುಧವಾರ, ಮೇ 18, 2022
27 °C

ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾಸಿಂಧು ಅಕಾಡೆಮಿ: ಭಾನುವಾರ ಪ್ರಿಯಾಂಕ ಮರಿಯಪ್ಪ ರಂಗಪ್ರವೇಶ.ಬೆಂಗಳೂರು ದಕ್ಷಿಣ ಡೆಲ್ಲಿ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಪ್ರಿಯಾಂಕ ಬಹುಮುಖ ಪ್ರತಿಭೆ. ನೃತ್ಯವಲ್ಲದೇ ಚಿತ್ರಕಲೆ, ಸಂಗೀತ, ಕ್ರೀಡೆಯಲ್ಲೂ ಆಸಕ್ತಿ.ಐದು ವರ್ಷದವಳಿದ್ದಾಗ ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ರಾಜಿ ವಿಶ್ವನಾಥನ್ ಬಳಿ ನೃತ್ಯಾಭ್ಯಾಸ ಆರಂಭಿಸಿದಳು. 2003ರಲ್ಲಿ ಭಾರತಕ್ಕೆ ಮರಳಿದ ನಂತರ ನರ್ಮದಾ ಅವರ ಬಳಿ ನೃತ್ಯಾಭ್ಯಾಸ ಮುಂದುವರಿಸಿದಳು. ನಾಲ್ಕು ವರ್ಷಗಳಿಂದ ಪೂರ್ಣಿಮಾ ಗುರುರಾಜ್ ಬಳಿ ನೃತ್ಯ ತರಬೇತಿ ಪಡೆಯುತ್ತಿದ್ದಾಳೆ. ಗೀತಾ ಮೂರ್ತಿ ಅವರ ಬಳಿ ಕರ್ನಾಟಕ ಸಂಗೀತವನ್ನೂ ಕಲಿತಿದ್ದಾಳೆ.ನಾಲ್ಕು ವರ್ಷಗಳಿಂದ ಯಾನಾ ಲೂಯಿಸ್ ನೃತ್ಯ ಕಂಪೆನಿಯ ಯಾನಾ ಲೂಯಿಸ್ ಅವರಿಂದ ಶಾಸ್ತ್ರೀಯ ಬ್ಯಾಲೆ ಅಭ್ಯಾಸ ಮಾಡುತ್ತಿದ್ದಾಳೆ. ತನ್ನ ಪ್ರತಿಭೆಯಿಂದಾಗಿ ರಾಜ್ಯ, ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾಳೆ.

 

ಸ್ಥಳ: ಜೆಎಸ್‌ಎಸ್ ಸಭಾಂಗಣ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ. ಸಂಜೆ: 6. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.