ರಂಗಪ್ರವೇಶ, ಸಂಗೀತ ನೃತ್ಯ

7

ರಂಗಪ್ರವೇಶ, ಸಂಗೀತ ನೃತ್ಯ

Published:
Updated:
ರಂಗಪ್ರವೇಶ, ಸಂಗೀತ ನೃತ್ಯ

ನೃತ್ಯಕಲಾಮಂದಿರ: ಶನಿವಾರ ಮಧುಲಿಕಾ ಆಚಾರ್ಯ ಅವರ ಭರತನಾಟ್ಯ ರಂಗಪ್ರವೇಶ (ನಟುವಾಂಗ: ಶೀಲಾ ಚಂದ್ರಶೇಖರ್. ಸಂಗೀತ: ವಿದ್ವಾನ್ ಡಿ. ಎಸ್. ಶ್ರೀವತ್ಸ. ಮೃದಂಗ: ಎನ್. ನಾರಾಯಣ ಸ್ವಾಮಿ. ವೀಣೆ: ಎ. ಶಂಕರ ರಾಮನ್.ವಯಲಿನ್: ಆರ್. ದಯಾಕರ್. ಕೊಳಲು: ಎನ್. ಆರ್. ನರಸಿಂಹಮೂರ್ತಿ. ಖಂಜಿರ ಮತ್ತು ಮೋರ್ಚಿಂಗ್: ಶ್ರೀಹರಿ).ಮಧುಲಿಕಾ ಆಚಾರ್ಯ ಎಂಟನೇ ವರ್ಷದಲ್ಲೇ ದಿವಂಗತ ಗುರು ಪದ್ಮಿನಿ ರಾವ್ ಅವರ ಮಾರ್ಗದರ್ಶನದಲ್ಲಿ ನೃತ್ಯದ ಪ್ರಥಮ ಹೆಜ್ಜೆ ಇಟ್ಟರು.ಆನಂತರ ರಾಧಾ ರಾಮಸ್ವಾಮಿ ಮತ್ತು ಶ್ರೀವಲ್ಲಿ ಅಂಬರೀಶ್ ಅವರ ಬಳಿ ಕೆಲ ಕಾಲ ನೃತ್ಯಾಭ್ಯಾಸ ಮಾಡಿ ಎಂಟು ವರ್ಷಗಳ ಹಿಂದೆ ನೃತ್ಯಕಲಾಮಂದಿರಕ್ಕೆ ಸೇರಿಕೊಂಡರು. ಅಲ್ಲಿ ಗುರು ಬಿ. ಭಾನುಮತಿ ಮತ್ತು ಶೀಲಾ ಚಂದ್ರಶೇಖರ್ ಅವರ ಬಳಿ ನೃತ್ಯ ಕಲಿಯುತ್ತಿದ್ದಾರೆ.ಈ ತಂಡದ ಸದಸ್ಯೆಯಾಗಿ ಇಸ್ಕಾನ್ ಬ್ರಹ್ಮೋತ್ಸವ, ಬೆಂಗಳೂರು ಹಬ್ಬ, ಆಳ್ವಾಸ್ ನುಡಿಸಿರಿ ಇತ್ಯಾದಿ ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾರೆ. ಉತ್ತಮ ಅಂಕ ಪಡೆದು ಭರತನಾಟ್ಯದಲ್ಲಿ ಜ್ಯೂನಿಯರ್ ಉತ್ತೀರ್ಣಳಾಗಿರುವ ಮಧುಲಿಕಾ, ಸಮನ್ವಯ ಕಲಾ ಕೇಂದ್ರದಲ್ಲಿ ಸಂಗೀತವನ್ನೂ ಕಲಿಯುತ್ತಿದ್ದಾರೆ.ಕ್ರೈಸ್ತ ವಿವಿಯಿಂದ ಬಿ.ಕಾಂ ಪದವಿ ಪಡೆದಿದ್ದು ಪ್ರಸ್ತುತ ಜೈನ್ ವಿವಿಯಲ್ಲಿ ಭರತನಾಟ್ಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ನೃತ್ಯದ ಕುರಿತು ಅತೀವ ಆಸಕ್ತಿ ಹೊಂದಿರುವ ಆಕೆ ಅದನ್ನೇ ವೃತ್ತಿಯಾಗಿಸಿಕೊಳ್ಳಲು ಬಯಸಿದ್ದಾರೆ.ಅತಿಥಿಗಳು: ಡಾ. ಆರ್.ವಿ. ರಾಘವೇಂದ್ರ, ಡಾ. ಕರುಣಾ ವಿಜಯೇಂದ್ರ, ಡಾ. ಎಂ. ಸೂರ್ಯಪ್ರಸಾದ್.ಸ್ಥಳ: ಜೆಎಸ್‌ಎಸ್ ಸಭಾಂಗಣ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ. ಸಂಜೆ 6.

ಸಮುದ್ರನಾಟ್ಯಶ್ರೀ: ಭಾನುವಾರ ಸುಮಾ ನಾಗೇಶ್ ಅವರ ಶಿಷ್ಯೆ ಎ. ಸಮುದ್ರ ಭರತನಾಟ್ಯ ರಂಗಪ್ರವೇಶ (ನಟುವಾಂಗ: ಸುಮಾ ನಾಗೇಶ್. ಸಂಗೀತ: ವಿದುಷಿ ಡಾ. ಪ್ರಿಯಶ್ರೀ ರಾವ್. ಮೃದಂಗ: ಲಿಂಗರಾಜು. ವಯಲಿನ್: ನಟರಾಜ ಮೂರ್ತಿ. ಕೊಳಲು: ಗಣೇಶ್).ಬಿ.ವಿ. ರಜನಿ ಮತ್ತು ಆರ್. ಆನಂದಕುಮಾರ್ ಅವರ ಪುತ್ರಿಯಾದ ಸಮುದ್ರ 4ರ ಎಳವೆಯಿಂದಲೇ ಭರತನಾಟ್ಯದಲ್ಲಿ ಮೊದಲ ಹೆಜ್ಜೆ ಇಟ್ಟವರು.ವಾಣಿ ಕೌಶಿಕ್ ಅವರಲ್ಲಿ ಆರಂಭಿಕ ನೃತ್ಯಾಭ್ಯಾಸ ಮಾಡಿ ಸುಮಾ ನಾಗೇಶ್ ಅವರ ಬಳಿ ಮುಂದುವರಿಸಿದ್ದಾರೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಜೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಂದ ಉತ್ತೀರ್ಣರಾಗಿದ್ದಾರೆ.ಬಿಬಿಎಂ ಪದವಿ ಪಡೆದಿರುವ ಸಮುದ್ರ `ಗ್ರೀನ್‌ಪೀಸ್~ ಸಂಸ್ಥೆಯ ಕಾರ್ಯಕರ್ತೆಯಾಗಿಯೂ ಕೆಲಸ ಮಾಡಿದ್ದಾರೆ. ಭರತನಾಟ್ಯವಲ್ಲದೇ `ಚಾವ್~ ನೃತ್ಯವನ್ನೂ ಕಲಿತಿದ್ದಾರೆ. ಪೇಂಟಿಂಗ್, ಈಜಿನಲ್ಲಿಯೂ ಆಸಕ್ತಿ. ಕರಾಟೆಯಲ್ಲಿ ಗ್ರೀನ್ ಸೀನಿಯರ್ ಬೆಲ್ಟ್ ಗಳಿಸಿದ್ದಾರೆ.ನಾಟ್ಯಶ್ರೀ ಸಂಸ್ಥಾಪಕಿ ಗುರು ಸುಮಾ ನಾಗೇಶ್ ರಾಜ್ಯದ ಹೆಸರಾಂತ ನೃತ್ಯ ಕಲಾವಿದೆ. ರಂಗಭೂಮಿ ನಟರೂ ಆಗಿರುವ ಪತಿ ನಾಗೇಶ್ ಜತೆಗೂಡಿ 1986ರಲ್ಲೇ `ನಾಟ್ಯಶ್ರೀ~ ಸ್ಥಾಪಿಸಿದ್ದಾರೆ.

ಗುರು ರಾಧಾ ಶ್ರೀಧರ್ ಮತ್ತು ಪ್ರೊ. ಎಂ. ಆರ್. ಕೃಷ್ಣಮೂರ್ತಿ ಅವರ ಬಳಿ ನೃತ್ಯಾಭ್ಯಾಸ ಮಾಡಿರುವ ಅವರು ಪಂಡನಲ್ಲೂರು ಹಾಗೂ ಕಲಾಕ್ಷೇತ್ರ ಶೈಲಿಯ ನಾಟ್ಯ ಪ್ರಕಾರದಲ್ಲಿ ಪಳಗಿದ್ದಾರೆ.ದೇಶ, ವಿದೇಶದ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಸುಮಾ ನಾಗೇಶ್ ಗೋವಾ ಕಲಾ ಅಕಾಡೆಮಿ ಸಮಿತಿ ಸದಸ್ಯರಲ್ಲಿ ಒಬ್ಬರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯಾಗಿ ಕೆಲಸ ಮಾಡಿದ್ದಾರೆ.

 

ಲಂಡನ್‌ನ ಸೃಷ್ಟಿ ಸ್ಕೂಲ್ ಆಫ್ ಡಾನ್ಸ್‌ನಲ್ಲಿ ಶಿಕ್ಷಕಿಯಾಗಿ, ತಿರುಚಿರಾಪಲ್ಲಿಯ ಭಾರತೀದಾಸನ್ ವಿವಿಯಲ್ಲಿ ಸಂದರ್ಶನ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅತ್ಯುತ್ತಮ ಅಭಿನಯಕ್ಕೆ ಖ್ಯಾತರಾಗಿರುವ ಸುಮಾ ನೃತ್ತ ಮತ್ತು ನಾಟ್ಯದಲ್ಲಿ ಪರಿಪೂರ್ಣತೆ ಸಾಧಿಸಿದ್ದಾರೆ.ಅತಿಥಿಗಳು: ಡಾ. ಚಂದ್ರಶೇಖರ ಕಂಬಾರ, ವಿದುಷಿ ಪ್ರೊ. ಜಯಾ, ಅಧ್ಯಕ್ಷತೆ: ಪ್ರೊ. ಎಂ.ಆರ್. ಕೃಷ್ಣಮೂರ್ತಿ.ಸ್ಥಳ: ಜೆಎಎಸ್ ಸಭಾಂಗಣ, ಜಯನಗರ 8ನೇ ಬ್ಲಾಕ್.  ಸಂಜೆ 6.

`ಕಲಾಕೌಮುದಿ~ ಸಂಗೀತ ನೃತ್ಯೋತ್ಸವ ವಿದ್ಯಾ ಇನ್‌ಸ್ಟಿಟ್ಯೂಟ್ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್: ಶನಿವಾರ ಸಂಜೆ 5.30ಕ್ಕೆ ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಪ್ರಧಾನ ಕಾರ್ಯದರ್ಶಿ ಕೆ. ಎನ್. ಪುಟ್ಟಮ್ಮ ಅವರಿಂದ `ಕಲಾಕೌಮುದಿ~ ಸಂಗೀತ ನೃತ್ಯ ಕಲೋತ್ಸವ ಉದ್ಘಾಟನೆ.  ನಂತರ ಗೀತ ಕುಂಚ ಕಾರ್ಯಕ್ರಮ. ಗಾಯನ: ವಿಜಯ ಹಾವನೂರು. ಕೀ ಬೋರ್ಡ್: ವಸಂತಕುಮಾರ್ ಕುಂಬ್ಲೆ. ತಬಲಾ: ರಾಘವೇಂದ್ರ ಜೋಶಿ.ಚಿತ್ರ ಕಲಾವಿದ: ಉದಯ ಕೃಷ್ಣ.

ಸಂಜೆ 6.30ಕ್ಕೆ ದಿವ್ಯ ಪ್ರಭಾಕರ್ ಅವರಿಂದ ಭರತನಾಟ್ಯ. ನಟುವಾಂಗ: ಗುರು ರೇವತಿ ನರಸಿಂಹನ್. ಗಾಯನ: ಬಾಲಸುಬ್ರಹ್ಮಣ್ಯ ಶರ್ಮ. ಮೃದಂಗ: ಗುರುಮೂರ್ತಿ. ಕೊಳಲು: ಜಯರಾಮ್. ಪಿಟೀಲು: ಹೇಮಲತ.

 

ಭಾನುವಾರ ಸಂಜೆ 5.30ಕ್ಕೆ ಹಿಂದೂಸ್ತಾನಿ ಗಾಯಕ ಪಂಡಿತ್ ಫಯಾಜ್ ಖಾನ್ ಅವರಿಗೆ `ಕಲಾಕೌಮುದಿ~ ಪುರಸ್ಕಾರ ಪ್ರದಾನ. ನಂತರ ಅವರಿಂದ ಗಾಯನ. ತಬಲಾ: ಶಶಿಭೂಷಣ್ ಗುರ್ಜರ್. ಅತಿಥಿಗಳು: ಡಾ. ನಾ. ಸೋಮೇಶ್ವರ, ಕೆ. ಎನ್. ವೆಂಕಟೇಶ. ಅಧ್ಯಕ್ಷತೆ: ರಾಜೇಂದ್ರ ಪ್ರಸಾದ್.ಸ್ಥಳ: ಹತ್ವಾರ್ ಸಭಾಂಗಣ, ಭಾರತೀಯ ಸಂಸ್ಕೃತಿ ವಿದ್ಯಾಪೀಠ, 4ನೇ ಮುಖ್ಯರಸ್ತೆ, ಚಾಮರಾಜಪೇಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry