ಮಂಗಳವಾರ, ಮೇ 18, 2021
24 °C

ರಂಗಭೂಮಿಗೆ ಹವ್ಯಾಸಿ ತಂಡಗಳ ಪಾತ್ರ ಅನನ್ಯ: ಅಬ್ದುಲ್ ಖದೀರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದ ಭಾರತೀಯ ಸಂಸ್ಕೃತಿ ಮೇಲೆ ಪೆಟ್ಟು ಬೀಳುತಿದ್ದು ಇದಕ್ಕೆ ರಂಗಭೂಮಿಯೂ ಹೊರತಲ್ಲ. ಈ ಸ್ಥಿತಿಯಲ್ಲಿ ಹವ್ಯಾಸಿ ನಾಟಕ ತಂಡಗಳ ಕೊಡುಗೆ ಅನನ್ಯ ಎಂದು ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಹೇಳಿದರು.ಜಿಲ್ಲಾ ರಂಗ ಮಂದಿರದಲ್ಲಿ ಸಮುದಾಯ ಸಮನ್ವಯ ಸಮಿತಿ ಹಾಗೂ ಕನ್ನಡ  ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೆಗ್ಗೋಡಿನ ಚಿಕ್ಕಮಂಗಳೂರಿನ ರವಿ ರಂಗಭೂಮಿ  ತಂಡ ಪ್ರದರ್ಶಿಸಿದ  ಡಾ. ಸಿದ್ದಲಿಂಗಯ್ಯ ಅವರ ಜೀವನ ಆಧಾರಿತ `ಊರು ಕೇರಿ' ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೆ ಗ್ರಾಮೀಣ ಪ್ರದೇಶದಲ್ಲಿ ರಂಗ ಚಟುವಟಿಕೆ ಕುರಿತು ಆಸಕ್ತಿ ಇತ್ತು. ಟಿ.ವಿ. ಮಾಧ್ಯಮದಿಂದಾಗಿ ಅದು ನಶಿಸಿಹೋಗುತ್ತಿದೆ ಎಂದು  ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶಾಂತಕುಮಾರ ಪಾಟೀಲ ಅಭಿಪ್ರಾಯಪಟ್ಟರು.ಮಯೂರ ಬಸವರಾಜ  ಅಧ್ಯಕ್ಷತೆ ವಹಿಸಿದ್ದರು. ಚಂದ್ರಪ್ಪ ಹೆಬ್ಬಾಳ್ಕರ ಉಪಸ್ಥಿತರಿದ್ದರು. ವಿಜಯಕುಮಾರ ಸೋನಾರೆ ನಿರೂಪಿಸಿದರು. 18ರಂದು ಇದೇ ತಂಡವು `ಬದುಕು ಬಯಲು' ನಾಟಕವನ್ನು ಪ್ರದರ್ಶಿಸಲಿದೆ ಎಂದು ಸಮುದಾಯದ ಸಹ ಕಾರ್ಯದರ್ಶಿ ನಾಗೇಂದ್ರ ಸಿಂಗೋಡೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.