ಗುರುವಾರ , ಜೂನ್ 24, 2021
21 °C

ರಂಗಭೂಮಿಯಲ್ಲಿ ಕೆಲಸ ಮಾಡುವವರಿಗೆ ಶ್ರದ್ಧೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಂಗಭೂಮಿಯಲ್ಲಿ ಕೆಲಸ ಮಾಡುವವರಿಗೆ ಶ್ರದ್ಧೆಯೆಂಬುದು ಕರಗತವಾಗಿರಬೇಕು. ಆಗ ಮಾತ್ರ ಕಲಾಸರಸ್ವತಿ ಒಲಿಯುತ್ತಾಳೆ ಎಂದು ವಿಮರ್ಶಕ ಪ್ರೊ. ಎಲ್.ಎಸ್.ಶೇಷಗಿರಿರಾವ್ ಅಭಿಪ್ರಾಯಪಟ್ಟರು.

ಸಂದೇಶ ರಂಗ ತಂಡವು ರಂಗಕರ್ಮಿ ಪರ್ವತವಾಣಿಯವರ ಜನ್ಮಶತಮಾನೋತ್ಸವ ಪ್ರಯುಕ್ತ ಈಚೆಗೆ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರ್ವತವಾಣಿ ಅವರು ರಚಿಸಿರುವ ಅನೇಕ ನಾಟಕಗಳು ಇಂದಿಗೂ ಪ್ರಸ್ತುತವೆನಿಸುತ್ತದೆ. ರಂಗಭೂಮಿಗೆ ಕಾಲಿಡುವ ಯುವ ಕಲಾವಿದರು ವೃತ್ತಿಪರತೆಯೊಂದಿಗೆ ಶ್ರದ್ದೆಯನ್ನು ಅಳವಡಿಸಿಕೊಳ್ಳಬೇಕು ಎಂಬ ಪರ್ವವಾಣಿಯವರ ಮಾತುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಕೆನರಾಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಾ.ಎಸ್.ಟಿ.ರಾಮಚಂದ್ರ, ನಟಿ ಯಮುನಾಮೂರ್ತಿ, ರಂಗಕರ್ಮಿ ಎಸ್.ಕೆ.ಮಾಧವರಾವ್ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪರ್ವತವಾಣಿ ಅವರ `ಮಂಗಮಾಯ~ ಮತ್ತು `ಗೀತಾ ರಾಕ್ಷಸ~ ನಾಟಕಗಳನನ್ನು  ಪ್ರದರ್ಶಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.