ಸೋಮವಾರ, ನವೆಂಬರ್ 18, 2019
23 °C

`ರಂಗಭೂಮಿಯ ಜವಾಬ್ದಾರಿ ಅಧಿಕ'

Published:
Updated:

ಬಳ್ಳಾರಿ: ತೀವ್ರವಾಗಿ ಹದಗೆಟ್ಟಿರುವ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಯನ್ನು ಸರಿಪಡಿಸುವ ಜವಾಬ್ದಾರಿಯು ರಂಗಭೂಮಿಯ ಕೈಲಿದೆ ಎಂದು ಡಾ. ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.ರಂಗಜಂಗಮ ಗ್ರಾಮೀಣಾಭಿವೃದ್ದಿ ಸಂಸ್ಥೆಯು ನಗರದ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.ಸಾಮಾಜಿಕ ಕಾಳಜಿ ಇರುವ ರಂಗ ಭೂಮಿಯು ನಾಟಕಗಳ ಮೂಲಕ ಸಮಾಜದ ಅಂಕು- ಡೊಂಕುಗಳನ್ನು ಸರಿಪಡಿಸಬೇಕಿದೆ ಎಂದರು. ಹಣ್ಣುಕಾಯಿ ಶಿವ ರುದ್ರಯ್ಯ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಹಾಲ್ಕುರಿಕೆ ಶಿವಶಂಕರ್, ನಾಡೋಜ ಬೆಳಗಲ್ ವೀರಣ್ಣ ಮಾತನಾಡಿದರು. ನಾಟಕ ಕಾರ ರಾಜಪ್ಪ ದಳವಾಯಿ, ರಂಗ ನಿರ್ದೇಶಕ ಸಾಂಬಶಿವ ದಳವಾಯಿ ಅವರಿಗೆ ರಂಗಜಂಗಮ ಬಿರುದು ನೀಡಲಾಯಿತು. ಸ್ಥಳೀಯ ಕಲಾವಿದರಾದ ಲತಾಶ್ರೀ, ವೆಂಕೋಬಾಚಾರಿ, ಎಂ.ಎ. ಆರ್. ಉಮರ್, ವಿ.ಎಂ. ವೀರೇಶಯ್ಯ ಸ್ವಾಮಿ, ಶ್ರೀರಾಮುಲು, ಪಂಪಾಪತಿ ಸಾರಥಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ನಂತರ ರಂಗತೋರಣ, ಮಯೂರ ಕಲಾಸಂಘ, ರಂಗಜಂಗಮದಿಂದ ಅಣ್ಣಾಜಿ ಕೃಷ್ಣಾರೆಡ್ಡಿ ನಿರ್ದೇಶನದಲ್ಲಿ `ಸಮನ್ವಯದೆಡೆಗೆ' ನಾಟಕ ಪ್ರದರ್ಶನಗೊಂಡಿತು. ಕಿಶೋರ್ ಮತ್ತು ಪ್ರದೀಪ್ ಅವರಿಂದ ಏಕಪಾತ್ರಾಭಿನಯ, ಕಪ್ಪಗಲ್ಲು ಬಸವರಾಜ ಅವರಿಂದ ಬಯಲಾಟ ಪ್ರದರ್ಶನ ಮನಸೂರೆಗೊಂಡಿತು.ಜಂಬುನಾಥ, ರಮೇಶ್‌ಗೌಡ ಪಾಟೀಲ್, ಶಂಕರ್ ನಾಯ್ಡು, ಬಿ.ಗಂಗಣ್ಣ, ಸಿದ್ಧಲಿಂಗಯ್ಯ ಸ್ವಾಮಿ, ವಸಂತ, ಉಮೇಶ್  ಉಪಸ್ಥಿತರಿದ್ದರು. ಜೋಳದರಾಶಿ ಪಂಪನಗೌಡ ನಿರೂ ಪಿಸಿದರು. ಬಿ.ಗಂಗಣ್ಣ ವಂದಿಸಿದರು.

ಪ್ರತಿಕ್ರಿಯಿಸಿ (+)