ರಂಗಮಂದಿರಕ್ಕೆ ರೂ 109.2 ಲಕ್ಷ ವೆಚ್ಚ

7

ರಂಗಮಂದಿರಕ್ಕೆ ರೂ 109.2 ಲಕ್ಷ ವೆಚ್ಚ

Published:
Updated:

ಗುಲ್ಬರ್ಗ: ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಬಳಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಂಗಮಂದಿರ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದು, ಹೈದರಾಬಾದ ಕರ್ನಾ ಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 1997ರಿಂದ 2011ರ ಜನವರಿ ಅಂತ್ಯದವರೆಗೆ ಬಿಡುಗಡೆ ಮಾಡಿದ  154.86 ಲಕ್ಷ ರೂಪಾಯಿ ಅನುದಾನದ ಪೈಕಿ 109.20 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಅಮರನಾಥ ಎನ್. ಪಾಟೀಲ್ ತಿಳಿಸಿದ್ದಾರೆ.ಅಧ್ಯಕ್ಷರು ತಮ್ಮ ವಿವೇಚನಾ ನಿಧಿಯಿಂದ ರೂ 21 ಲಕ್ಷ ನೀಡಿದ್ದು ಒಟ್ಟು 154.86 ಲಕ್ಷ ಮೊತ್ತದಲ್ಲಿ ರೂ 27.75 ಲಕ್ಷ ಮೊತ್ತದ ಕಾಮಗಾರಿಯನ್ನು ಕರ್ನಾಟಕ ಭೂಸೇನಾ ನಿಗಮವು ಪೂರ್ಣಗೊಳಿಸಿದೆ. ಉಳಿದ 126.87 ಲಕ್ಷ ಮೊತ್ತದ ಕಾಮಗಾರಿ ಲೋಕೋಪಯೋಗಿ ಇಲಾಖೆಗೆ ವಹಿಸಿದ್ದು, ಕಾಮಗಾರಿಯು ಮುಕ್ತಾಯ ಹಂತ ತಲುಪಿದೆ. ಇದರ ಅಂದಾಜು ವೆಚ್ಚ 2.09 ಕೋಟಿ ಇರುತ್ತದೆ ಎಂದು ಅವರು ತಿಳಿಸಿದರು.ಈ ಕಾಮಗಾರಿಯನ್ನು ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಹಾಗೂ ಮಂಡಳಿಯಿಂದ ಕಾಮಗಾರಿಗೆ ಶೇ 75ರಷ್ಟು ಅನುದಾನವನ್ನು ಬಿಡುಗಡೆ ಮಾಡಿರುವುದರಿಂದ ಮಂಡಳಿಯ ನಾಮಫಲಕ ಅಳವಡಿಸಬೇಕು ಎಂದರು.ಇದಕ್ಕೂ ಮುನ್ನ ಅಮರನಾಥ ಪಾಟೀಲ್ ಹಾಗೂ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ರಂಗಮಂದಿರ ಕಾಮಗಾರಿಯನ್ನು ಪರಿಶೀಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry