ಮಂಗಳವಾರ, ಏಪ್ರಿಲ್ 20, 2021
31 °C

ರಂಗಮಂದಿರದಲ್ಲಿ ಪದವಿ ಪೂರ್ವ ಕಾಲೇಜು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ರಂಗಮಂಚ ಮತ್ತು ಪಕ್ಕದ ಪ್ರಾಥಮಿಕ ಶಾಲೆಯ ಒಂದು ಕೋಣೆ ಗ್ರಾಮದ ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ತರಗತಿಯ ಕೊಠಡಿ. ಕಲಾವಿದರು ಬಣ್ಣ ಹಚ್ಚಿ ಕೊಳ್ಳುವ ಸಣ್ಣ ಕೋಣೆ ಪ್ರಾಂಶುಪಾಲರ ಹಾಗೂ ಆಡಳಿತದ ಕಚೇರಿ. ಕಲಾವಿದರು ವಿಶ್ರಮಿಸಿಕೊಳ್ಳುವ ಕೊಠಡಿಯಲ್ಲಿ ಉಪನ್ಯಾಸಕರು ಮುಂದಿನ ತರಗತಿಯ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.ಇದು ತಾಲ್ಲೂಕಿನ ಬಾಚಿಗೊಂಡ ನಹಳ್ಳಿ ಗ್ರಾಮದ ಶ್ರೀ ತೋಂಟದ ಕೌದಿ ಮಹಾಂತೇಶ್ವರ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದುಃಸ್ಥಿತಿ.ಕಾಲೇಜಿಗೆ ಸ್ವಂತ ಕಟ್ಟಡವಿದ್ದರೂ ಅಲ್ಲಿ ತರಗತಿಗಳು ನಡೆಯುತ್ತಿಲ್ಲ. ಹಿಂದಿನ ಶಾಸಕ ಸಿರಾಜ್ ಶೇಖ್ ನಿರ್ಮಿಸಿರುವ ಚನ್ನಬಸವನಗೌಡರ ರಂಗಮಂದಿರದಲ್ಲಿ 2007ರಿಂದ ಕಾಲೇಜು ನಡೆಯುತ್ತಿದೆ.ಉತ್ತರ ಕರ್ನಾಟಕದಲ್ಲಿ 500 ಪದವಿ ಪೂರ್ವ ಕಾಲೇಜು ಸ್ಥಾಪಿಸಲು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು ಕೈಗೊಂಡಿದ್ದ ನಿರ್ಧಾರದ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಾಚಿಗೊಂಡನ ಹಳ್ಳಿಯಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆಯಾಯಿತು.ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಕಾಲೇಜಿಗಾಗಿ ರೂ.10 ಲಕ್ಷ ಮೌಲ್ಯದ 2 ಎಕರೆ ನಿವೇಶನ ಒದಗಿಸಿದರು. ನಬಾರ್ಡ್ ಅನುದಾನದಡಿ ರೂ.15.94 ಲಕ್ಷ ಮೊತ್ತದಲ್ಲಿ ಲೋಕೋಪಯೋಗಿ ಇಲಾಖೆ 2012ರಲ್ಲಿ ಕಾಲೇಜಿಗೆಂದು ಸುಸಜ್ಜಿತ ಕಟ್ಟಡ ನಿರ್ಮಿಸಿತು. ಆದರೆ, ಕಟ್ಟಡ ಕೇವಲ 2 ತರಗತಿಯ ಕೊಠಡಿ ಗಳನ್ನು ಹೊಂದಿದೆ. ಪ್ರಾಂಶುಪಾಲರ ಕಚೇರಿ ಸಹಿತ ಉಪನ್ಯಾಸಕರ ಕೋಣೆ ಗಳು ಇಲ್ಲ. ಹೀಗಾಗಿ ಗ್ರಾಮದ ರಂಗ ಮಂದಿರವೇ ವಿದ್ಯಾರ್ಥಿಗಳ ಪಾಲಿಗೆ ಕಾಲೇಜು ಕಟ್ಟಡವಾಗಿದೆ.ಗ್ರಾಮದ ಮುಖಂಡ ಕೆ.ಶಂಕರಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಸತೀಶ್ ಹಾಗೂ ಸದಸ್ಯರು ಮತ್ತು ಕಾಲೇಜಿನ ಆಡಳಿತ ವರ್ಗ ಹೆಚ್ಚುವರಿ ಎರಡು ಕೊಠಡಿಗಳನ್ನು ನಿರ್ಮಿಸುವಂತೆ ಪದವಿ ಪೂರ್ವ ಶಿಕ್ಷಣದ ಉಪ ನಿರ್ದೇಶಕರಿಗೆ ಮಾಡಿಕೊಂಡ ಮನವಿ ಫಲ ನೀಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.ಕಾಲೇಜಿನ ನೂತನ ಕಟ್ಟಡಕ್ಕೆ ಶೌಚಾಲಯ ಸಹಿತ ಇನ್ನೆರಡು ಕೋಣೆ ಗಳ ಅವಶ್ಯಕತೆ ಇದ್ದರೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಾಸಕ ನೇಮರಾಜ ನಾಯ್ಕ ಹಿಂದೇಟು ಹಾಕು ತ್ತಿದ್ದಾರೆ ಎಂದು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಚ್.ಎಂ. ಕೊಟ್ರಬಸಯ್ಯ ವಿಷಾದಿಸುತ್ತಾರೆ.ಎರಡೇ ಕೋಣೆಗಳನ್ನು ಹೊಂದಿರುವ ಕಟ್ಟಡವನ್ನು ತರಾತುರಿಯಿಂದ ಉದ್ಘಾ ಟಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತವನ್ನು ಕಡೆಗಣಿಸಿರುವ ಶಾಸಕರಿಗೆ ಕನಿಷ್ಠ ವಿವೇಚನೆ ಇಲ್ಲ ಎಂದು ಸಾಹಿತಿ ಹುರಕಡ್ಲಿ ಶಿವಕುಮಾರ್ ಕಿಡಿ ಕಾರುತ್ತಾರೆ.ಕಳೆದ ಬಾರಿಯ ಪಿಯುಸಿ ಪರೀಕ್ಷೆ ಯಲ್ಲಿ ಶೇ 93 ಫಲಿತಾಂಶ ಗಳಿಸುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಕಾಲೇಜಿನ ವಿದ್ಯಾರ್ಥಿಗಳು ಮೈದಾನದ ಕೊರತೆ ಇದ್ದರೂ, ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿಗಾಗಿ ಸೆಣಸಿದ್ದಾರೆ. ಕಾಲೇಜಿನ ನೂತನ ಕಟ್ಟಡಕ್ಕೆ ಬೀಗ ಜಡಿದಿರುವ ಹಿನ್ನೆಲೆಯಲ್ಲಿ ಕತ್ತಲಾಗು ತ್ತಿದ್ದಂತೆ ಅನೈತಿಕ ಚಟುವಟಿಕೆಗಳ ತಾಣ ವಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದು ಶಾಸಕರು ಗಮನಹರಿಸ ಬೇಕೆಂದು ಆಗ್ರಹಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.