ರಂಗಮಂದಿರ ನಿರ್ಮಾಣ: ಅನುದಾನಕ್ಕೆ ಪ್ರಸ್ತಾವ

7

ರಂಗಮಂದಿರ ನಿರ್ಮಾಣ: ಅನುದಾನಕ್ಕೆ ಪ್ರಸ್ತಾವ

Published:
Updated:

ಹಳೇಬೀಡು: ಪ್ರೌಢಶಾಲೆ ಹಾಗೂ ಪಿಯು ಕಾಲೇಜಿಗೆ ಅನುಕೂಲ ವಾಗುವಂತೆ ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಂಗ ಮಂದಿರ ನಿರ್ಮಿಸಲು ಹಣ ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿ.ಪಂ. ಸದಸ್ಯೆ ಜಯಶೀಲ ಜಯಶಂಕರ್ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೆಜಿನಲ್ಲಿ ಶನಿವಾರ ನಡೆದ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನ ಮುಂದಿನ ಭವಿಷ್ಯ ರೂಪಿಸುವ ವೇದಿಕೆ. ಕಾಲೇಜು ಪ್ರವೇಶಿಸಿದ ತಕ್ಷಣ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸಾಧನೆಯತ್ತ ಕೇದ್ರೀಕರಿಸದಿದ್ದರೆ ಜೀವನದ ಉದ್ದಕ್ಕೂ ಪಶ್ಚಾತಾಪ ಪಡಬೇಕಾಗುತ್ತದೆ. ವಿದ್ಯಾಭ್ಯಾಸ ಅವಧಿಯಲ್ಲಿ ಓದಿನೊಂದಿಗೆ ತಮ್ಮಲ್ಲಿ ಅಡಗಿರುವ ಪ್ರತಿಭೆ ಹೊರಹಾಕಿದರೆ. ವ್ಯಾಸಂಗದ ನಂತರವೂ  ಪ್ರತಿಭೆ ಮುಂದುವರೆಸಿ ಸಮಾಜದಲ್ಲಿ ಹೆಸರು ಸಂಪಾದಿಸಬಹುದು ಎಂದು ತಿಳಿಸಿದರು.ಉಪ ಪ್ರಾಂಶುಪಾಲ ಜಿ.ಎಂ. ನರಸಿಂಹಮೂರ್ತಿ ಮಾತನಾಡಿ, ವಿದ್ಯಾಭ್ಯಾಸದ ನಂತರ ಉದ್ಯೋಗ ದೊರಕದೆ ಇದ್ದವರು ಬೇಸರದಿಂದ ಅನ್ಯ ಮಾರ್ಗ ಅನುಸರಿಸುವ ಅಗತ್ಯವಿಲ್ಲ. ಸಮಾಜಕ್ಕೆ ಅಗತ್ಯವಿರುವ ಸಾಕಷ್ಟು ವೃತ್ತಿ ನಿರ್ವಹಿಸಿ ಉತ್ತಮ ವ್ಯಕ್ತಿಯಾ ಗಬಹುದು. ಕೃಷಿ ಮುಂದಿನ ದಿನದಲ್ಲಿ ಲಾಭದಾಯಕವಾಗಲಿದೆ, ಅಲ್ಲಿ ಅವಕಾಶ ಇರುವುದರಿಂದ ಯುವಶಕ್ತಿ ಕೃಷಿ ಅನುಸರಿಸಬಹುದು ಎಂದರು.ಪ್ರಾಂಶುಪಾಲ ಎಚ್.ಆರ್. ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಿಯ ಕೊಕ್ಕೊ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಬಹುಮುಖ ಪ್ರತಿಭೆ ಜಿ.ಡಿ. ವಿದ್ಯಾ, ರಾಜ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳಾ ಕೊಕ್ಕೊ ತಂಡ ಹಾಗೂ ರಾಜ್ಯ ಮಟ್ಟದ 100 ಮೀಟರ್ ಓಟದಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದ ದರ್ಶನ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ನಸ್ರೀಮಾ ಪಿರ್ಧೊಸ್ ವಾರ್ಷಿಕ ವರದಿ ಮಂಡಿಸಿದರು. ಉಪನ್ಯಾಸಕ ಎಂ.ಸಿ. ಶಿವಕುಮಾರ್ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು. ಹಾಲಸಿದ್ದಪ್ಪ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry