ರಂಗಶಂಕರದಲ್ಲಿ ನಮ್ಮ ಮೆಟ್ರೊ

ಸೋಮವಾರ, ಮೇ 20, 2019
30 °C

ರಂಗಶಂಕರದಲ್ಲಿ ನಮ್ಮ ಮೆಟ್ರೊ

Published:
Updated:

ವಿಮೂವ್ ಥಿಯೇಟರ್ ತಂಡದಿಂದ ಮಂಗಳವಾರ ಮತ್ತು ಬುಧವಾರ (ಆ.14) `ನಮ್ಮ ಮೆಟ್ರೊ~ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.ಅಭಿಷೇಕ್ ಅಯ್ಯಂಗಾರ್ ನಾಟಕ ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರು ನಗರ ಇತ್ತೀಚಿನ ದಿನಗಳಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ಗಳಿಸಿದ ಮಹಾನಗರಿ. ಹಳೆಯ ಸೊಬಗು ಮರೆಯಾಗುತ್ತಿದೆ.ರಾಜಕೀಯ ವಲಯದಲ್ಲಿ ಅಪಾರ ನಂಬಿಕೆ ಇಟ್ಟಿರುವ ಒಬ್ಬ ವೃದ್ಧ. ಆತ ಬ್ಯಾಂಕಿನ ಗುಮಾಸ್ತ. ಮತ್ತೊಬ್ಬ ಸಾಫ್ಟ್‌ವೇರ್ ಎಂಜಿನಿಯರ್, ಕಡಲೆಕಾಯಿ ಮಾರುವವನು ಹೀಗೆ ವಿವಿಧ ಹಿನ್ನೆಲೆಯ ಜನರು ನಗರದ ಕಟ್ಟೆಯೊಂದರ ಮೇಲೆ ಕುಳಿತುಕೊಂಡು ಹರಟೆ ಮೂಲಕ ತಮ್ಮ ತಮ್ಮ ಕಥೆಯನ್ನು ಹೇಳಿಕೊಳ್ಳುವ ಸ್ವಾರಸ್ಯಕರ ಸಂಗತಿ ನಾಟಕದ ವಸ್ತು.

ಸರಳ ನಿರೂಪಣೆ ಹಾಗೂ ಹಾಸ್ಯದ ಲೇಪನವೂ ನಾಟಕದ ವಿಶೇಷ.ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ಎರಡೂ ದಿನ ಸಂಜೆ 7.30.  

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry