ಶನಿವಾರ, ಮೇ 8, 2021
26 °C

ರಂಗಾಪುರ: ಬಾಲ್ಯವಿವಾಹಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಆಕೆಗಿನ್ನೂ ಶಾಲೆಗೆ ಹೋಗುವ ವಯಸ್ಸು. ಬಾಲೆಗೆ ಪೋಷಕರು ಮದುವೆ ಮಾಡಲು ಸಜ್ಜಾಗಿದ್ದರು. ಅವಳ ಆಸೆ, ಕನಸುಗಳನ್ನು ಚಿವುಟಿ, ಸಂಸಾರದ ಭಾರ ಹೊರೆಸಲು ಮುಂದಾಗಿದ್ದರು.ಬಾಲ್ಯವಿವಾಹದ ಸುದ್ದಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮದುವೆಗೆ ಬ್ರೇಕ್ ಹಾಕಿದರು. 14 ವರ್ಷದ ಆ ಬಾಲಕಿಯ ಮದುವೆಗೆ ಸಿದ್ಧತೆ ನಡೆಸಿದ್ದ ಪೋಷಕರಿಗೆ ಸಿಪಿಐ ಶ್ರೀಧರ್ ಮತ್ತು ಸಿಡಿಪಿಒ ತಿಪ್ಪಯ್ಯ ಮನವೊಲಿಸಿ, ಮದುವೆ ಮಾಡುವುದನ್ನು ನಿಲ್ಲಿಸಿದರು.ತಾಲ್ಲೂಕಿನ ರಾಮಗಿರಿ ಹೋಬಳಿ ರಂಗಾಪುರ ಗ್ರಾಮದ ಶೋಭಾ ತಮ್ಮ ಪುತ್ರಿ ನಾಗವೇಣಿಯನ್ನು ಅರಸಿಕೆರೆ ತಾಲ್ಲೂಕಿನ ಓಂಕಾರಮೂರ್ತಿ ಎಂಬವರೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಆಮಂತ್ರಣ ಪತ್ರಿಕೆ ಮುದ್ರಿಸಿ ಹಂಚಲಾಗಿತ್ತು. ನಿಗದಿಯಂತೆ ಅರಸಿಕೆರೆ ತಾಲ್ಲೂಕಿನ ಸಾತನಗರದಲ್ಲಿ ಏ. 16ರಂದು ಮಹೂರ್ತ ನಡೆಯಬೇಕಿತ್ತು.ಬಾಲಕಿ ಮದುವೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ಮಾಹಿತಿ ಪಡೆದ ಅಧಿಕಾರಿಗಳು ಕಾರ್ಯ ಪ್ರವೃತ್ತರಾದರು. ಹುಡುಗಿಯ ಜನ್ಮದಿನಾಂಕ ಪರಿಶೀಲಿಸಿದರು. ಇದರಂತೆ, ಮದುವೆ ದಿನಕ್ಕೆ ಹುಡುಗಿಗೆ 14 ವರ್ಷ 4 ತಿಂಗಳು ಮಾತ್ರ ಆಗುತ್ತದೆ ಎಂದು ಅರಿತ ಅಧಿಕಾರಿಗಳು ಶುಕ್ರವಾರ ರಾತ್ರಿ ಗ್ರಾಮಕ್ಕೆ ತೆರಳಿದರು.

 

18 ವರ್ಷ ಪೂರ್ಣಗೊಳ್ಳದೆ ಮಗಳನ್ನು ಮದುವೆ ಮಾಡುವುದು ಅಪರಾಧ. ಬಾಲ್ಯವಿವಾಹ ಮಾಡಿದ ಪೋಷಕರಿಗೂ, ಪ್ರೇರೇಪಿಸಿದವರಿಗೂ ಶಿಕ್ಷೆ ಆಗುತ್ತದೆ. ಆದ್ದರಿಂದ ಮದುವೆ ನಿಲ್ಲಿಸಿ ಎಂದು ಪೋಷಕರ ಮನವೊಲಿಸಿದರು. ಮದುವೆ ನಿಲ್ಲಿಸಲು ಗ್ರಾಮಸ್ಥರೂ ಬೆಂಬಲ ಸೂಚಿಸಿದರು.ಗ್ರಾಮಸ್ಥರಾದ ಜಿ.ಆರ್. ರವಿ, ದೇವೇಂದ್ರಪ್ಪ, ಹಾಲೇಶಪ್ಪ, ಎಚ್. ತಿಮ್ಮಪ್ಪ, ನಾಗರಾಜ, ಷಡಕ್ಷರಿ, ರಾಜು ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.