ಗುರುವಾರ , ಫೆಬ್ರವರಿ 25, 2021
24 °C

ರಂಗಿನಾಟಕ್ಕೆ ಸಂಭ್ರಮದ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಿನಾಟಕ್ಕೆ ಸಂಭ್ರಮದ ತೆರೆ

ಬಾಗಲಕೋಟೆ:  ಮೂರು ದಿನಗಳ ಕಾಲ ನಡೆದ ಹೋಳಿ ಹಬ್ಬದ ಬಣ್ಣದಾಟ ಬುಧವಾರ ಸಂಭ್ರಮದ ತೆರೆ ಕಂಡಿತು. ಜಾತಿ-ಮತ ಎನ್ನದೇ ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ಭಾಗವಹಿಸಿ ಖುಷಿಪಟ್ಟರು.ಕೊನೆಯ ದಿನ ಹೊಸಪೇಟೆ ಓಣಿಯ ಜನತೆ ಬಣ್ಣದ ಗಾಡಿಗಳ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಸ್ತೆಯ ಅಕ್ಕಪಕ್ಕದಲ್ಲಿ ಜನರಿಗೆ ಬಣ್ಣದ ನೀರನ್ನು ಎರಚುತ್ತಾ, ‘ಲಬೋ.. ಲಬೋ..’ ಎಂದು ಬಾಯಿ ಬಡೆದುಕೊಳ್ಳುತ್ತಾ ಹಲಗೆ ನಾದಕ್ಕೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ಆಕರ್ಷಕವಾಗಿತ್ತು.

ಹೊಸಪೇಟೆ ಓಣಿಯಿಂದ ಬಣ್ಣದ ನೀರನ್ನು ತುಂಬಿಕೊಂಡು ಹೊರಟ ಎತ್ತಿನ ಗಾಡಿ ಮತ್ತು ಟ್ರ್ಯಾಕ್ಟರ್‌ಗಳು ಹಳೆಪೇಟೆ ಮಡು, ಜೈನ್‌ ಪೇಟೆ, ವೆಂಕಟಪೇಟೆ ಮತ್ತು ಕಿಲ್ಲಾ ಭಾಗದಲ್ಲಿ ಸಂಚರಿಸಿ ಕೆಂಪು ಬಣ್ಣದಾಟದಲ್ಲಿ ಯುವಕರು ಮಿಂದೇಳುವಂತೆ ಮಾಡಿದವು.ಕೆಲವು ಯುವಕರು ಹೆಣ್ಣಿನ ವೇಷ ಧರಿಸಿದ್ದರೆ, ಕೆಲವರು ಶ್ರೀಲಂಕಾದ ವೇಗದ ಬೌಲರ್ ಮಾಲಿಂಗ ಮತ್ತು ನರೇಂದ್ರ ಮೋದಿ ವೇಷದಲ್ಲಿ ಗಮನ ಸೆಳೆದರು.ಹಬ್ಬದ ಕೊನೆಗೆ ಬಣ್ಣದಾಟದಲ್ಲಿ ಮಿಂದೆದ್ದ ಯುವಕರು ತಾವು ಧರಿಸಿದ್ದ ಬಟ್ಟೆಗಳನ್ನು ವಿದ್ಯುತ್ ತಂತಿ ಹಾಗೂ ಗಿಡಕ್ಕೆ ಎಸೆದು ನೇತಾಡುವಂತೆ ಮಾಡಿದರು. ಮಹಿಳೆಯರು ಭರ್ಜರಿಯಾಗಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.ಬಿಗಿ ಬಂದೋಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬ್‌ನ್ಯಾಂಗ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜಗಲಿಯವರ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ವ್ಯವಸ್ಥೆ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.