ಬುಧವಾರ, ಅಕ್ಟೋಬರ್ 16, 2019
21 °C

ರಂಗೋಲಿಯಲ್ಲಿ ಮೂಡಿದ ವಿವೇಕಾನಂದ!

Published:
Updated:

ಮಂಗಳೂರು: `ವಿವಿಧತೆಯಲ್ಲಿ ಏಕತೆ~ ಸಾರುವ ಯುವ ಜನೋತ್ಸವದ ಆಕರ್ಷಣೆಗಳಲ್ಲಿ ಒಂದು `ಯುವ ಕೃತಿ~. ಪ್ರಧಾನ ಕಾರ್ಯಕ್ರಮ ನಡೆಯುವ ಮಂಗಳ ಕ್ರೀಡಾಂಗಣದ ಮಗ್ಗುಲಲ್ಲೇ ಇರುವ ಕರಾವಳಿ ಉತ್ಸವ ಮೈದಾನದಲ್ಲಿ ಒಂದು ಕಡೆ ವಿವಿಧ ರಾಜ್ಯಗಳ ತಿಂಡಿ ತಿನಿಸಿನ `ಆಹಾರ ಮೇಳ~ (ಫುಡ್ ಕೋರ್ಟ್) ಇದ್ದರೆ, ಅದಕ್ಕೆ ತಾಗಿಕೊಂಡೇ `ಯುವ ಕೃತಿ~ ಪ್ರದರ್ಶನ ಮಳಿಗೆಗಳಿವೆ.ಇಲ್ಲಿ ದೇಶದ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳನ್ನು ಪ್ರದರ್ಶನ-ಮಾರಾಟಕ್ಕೆ ಇಡಲಾಗಿದೆ. ಮೊದಲ ದಿನವಾದ ಗುರುವಾರ ಮಧ್ಯಾಹ್ನದ ವೇಳೆಗೇ ಬಹುತೇಕ ಮಳಿಗೆಗಳು ಭರ್ತಿಯಾಗಿದ್ದವು. ಮಳಿಗೆಗಳಲ್ಲಿ ಆಯಾ ರಾಜ್ಯದ, ಪ್ರದೇಶದ ವಿಶೇಷ ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ಇಡುವುದು ಸಾಮಾನ್ಯ ದೃಶ್ಯ.

 

ಇಲ್ಲೂ ಬಹುತೇಕ ಇಂಥದ್ದೇ ಮಳಿಗೆಗಳಿದ್ದವು. ರಾಯಪುರ ಬಳಿಯ ಬೋರಿಯಖುರ್ದ್ ಎಂಬ ಹಳ್ಳಿಯ 23ರ ಭೋಜರಾಜ ಧನಗರ್ ತಮ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿದರು. ಇವರ `ಯುವ ಕೃತಿ~ ಆವರಣದ ಹೊರಗೆ ಸ್ವಾಮಿ ವಿವೇಕಾನಂದ ಅವರನ್ನು ರಂಗೋಲಿಯಲ್ಲಿ ಆಕರ್ಷಕವಾಗಿ ಮೂಡಿಸಿದ್ದು ಗಮನ ಸೆಳೆಯಿತು.

Post Comments (+)