ಬುಧವಾರ, ಡಿಸೆಂಬರ್ 11, 2019
25 °C

ರಂಗ ಆಯಾಮ

Published:
Updated:
ರಂಗ ಆಯಾಮ

ಪ್ರದರ್ಶನ ಕಲಾ ಸಂಸ್ಥೆ ಮತ್ತು ಕೆಂಗಲ್ ಹನುಮಂತಯ್ಯ ಕಲಾಸೌಧ ಜಂಟಿಯಾಗಿ ಎರಡು ದಿನಗಳ `ರಂಗ ಆಯಾಮ~ವನ್ನು ಕೆ.ಎಚ್. ಕಲಾಸೌಧದಲ್ಲಿ ಆಯೋಜಿಸಿದೆ.ನಾಲ್ಕು ರೀತಿಯ ಕಲಾ ಪ್ರಕಾರಗಳಾದ ನೃತ್ಯ, ನಾಟಕ, ಸಂಗೀತ ಮತ್ತು ಚಲನಚಿತ್ರ ಪ್ರದರ್ಶನವನ್ನು ರಂಗ ಆಯಾಮದಲ್ಲಿ ನೋಡಬಹುದು.

ಶನಿವಾರ ಸಂಜೆ 4 ಕ್ಕೆ `ಶೂನ್ಯ ಫ್ಯೂಷನ್~ ಬ್ಯಾಂಡ್‌ನಿಂದ ರಾಕ್.5ಕ್ಕೆ ರಂಗ ಆಯಾಮ ಉದ್ಘಾಟನೆ ಮತ್ತು ಸನ್ಮಾನ, 6ಕ್ಕೆ `ಆ ದಿನಗಳು~ ಚಿತ್ರ ಕುರಿತು ನಿರ್ದೇಶಕ ಚೈತನ್ಯ ಅವರೊಂದಿಗೆ ಸಂವಾದ. ನಂತರ ಚಿತ್ರ ಪ್ರದರ್ಶನ.ಭಾನುವಾರ ಸಂಜೆ 5ಕ್ಕೆ ನೃತ್ಯ ಸಂಜೆಯ್ಲ್ಲಲಿ ರೂಪಾ ರೋಹಿತ್- ಯಮುನಾ ರೋಹಿತ್ ಅವರಿಂದ ಭರತನಾಟ್ಯ. `ಟಾರಂಟಿಸ್ಮೋ ಕ್ರಿಯೇಟಿವ್ ಡ್ಯಾನ್ಸ್~ ತಂಡದವರಿಂದ ನವೀನ ನೃತ್ಯ ಪ್ರದರ್ಶನ. `ವಿ ಮೂವ್ ಥಿಯೇಟರ್~ ತಂಡದಿಂದ ಕನ್ನಡ ನಾಟಕ `ನನ್ನವಳ ಕಾಗದ~.ಸ್ಥಳ: ಕೆ.ಎಚ್.ಕಲಾ ಸೌಧ.

ಪ್ರತಿಕ್ರಿಯಿಸಿ (+)