ರಂಗ ಕಲೆ ಪ್ರೋತ್ಸಾಹಕ್ಕೆ ಬಸವರಾಜ ಸಲಹೆ

7

ರಂಗ ಕಲೆ ಪ್ರೋತ್ಸಾಹಕ್ಕೆ ಬಸವರಾಜ ಸಲಹೆ

Published:
Updated:

ಬಳ್ಳಾರಿ: ರಂಗಭೂಮಿಯು ಪ್ರಚಲಿತ ವಿದ್ಯಮಾನಗಳ ಕನ್ನಡಿ ಇದ್ದಂತೆ. ನಾಟಕ ಮೂಲಕ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ವಾಸ್ತವಿಕ ಜೀವನದ ಬಗೆಗಿನ ಸಂದೇಶ ಒಳಗೊಂಡಿರುತ್ತದೆ ಎಂದು ಸಾಹಿತಿ ಟಿ.ಎಚ್.ಎಂ. ಬಸವರಾಜ ತಿಳಿಸಿದರು.ಜಿ.ವಿ. ನಾಟ್ಯ ಕಲಾ ಸಂಘದ ವತಿಯಿಂದ ನಗರದ ರಾಘವ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಆರ್.ಡಿ. ಕಾಮತ್ ವಿರಚಿತ `ಟಿಪ್ಪು ಸುಲ್ತಾನ್~ ಐತಿಹಾಸಿಕ ನಾಟಕದ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಒಂದು ನಾಟಕ ಪ್ರದರ್ಶನ ಯಶಸ್ವಿಯಾಗಬೇಕಾದರೆ ಕಲಾವಿದರು ಮಾತ್ರವಲ್ಲದೆ, ರಂಗದ ಹಿಂದೆ ಕಾರ್ಯ ನಿರ್ವಹಿಸುವಂತಹ ತಂತ್ರಜ್ಞರ, ನಿರ್ದೇಶಕನ, ವಾದ್ಯ ವೃಂದದವರ ಪಾತ್ರ ಅತ್ಯಂತ ಮುಖ್ಯ. ಅಲ್ಲದೆ ಪ್ರೇಕ್ಷಕರ ಪ್ರೋತ್ಸಾಹ ಮುಖ್ಯ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರು ಕಲೆಯನ್ನು ಪ್ರೋತ್ಸಾಹಿಸಿ, ಉಳಿಸಿ, ಬೆಳೆಸಬೇಕು ಎಂದು ಅವರು ತಿಳಿಸಿದರು.ಕಣ್ಮರೆಯಾಗುತ್ತಿರುವ ಜಾನಪದ ಕಲೆ, ರಂಗ ಕಲೆ, ಬೀದಿ ನಾಟಕಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು. ಪ್ರಾಣವನ್ನೇ ಪಣಕ್ಕಿಟ್ಟು  ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಅವರಂತಹ ನಾಯಕರ ತತ್ವಾದರ್ಶಗಳನ್ನು, ನಾಯಕತ್ವ ಗುಣವನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ್ ಸಲಹೆ ನೀಡಿದರು.ಕೋಟೇಶ್ವರ್‌ರಾವ್, ತೆಲುಗು ಸಂಸ್ಕೃತಿ ಅಧ್ಯಕ್ಷ ಗೋಪಾಲ್‌ಕೃಷ್ಣ, ಉಪಮೇಯರ್ ಇಬ್ರಾಹಿಂ ಬಾಬು, ಬಿಜೆಪಿ ಮುಖಂಡ ಸಮೀರ್ ಶೇಟ್, ಹಜರತ್ ಟಿಪ್ಪುಸುಲ್ತಾನ್ ಫೆಡರೇಷನ್ ಅಧ್ಯಕ್ಷ ಕಪಗಲ್ ರಸೂಲ್‌ಸಾಬ್ ಮತ್ತಿತರರು ಉಪಸ್ಥಿತರಿದ್ದರು.ಕವಿತಾ ವಸಂತಕುಮಾರ ಪ್ರಾರ್ಥಿಸಿದರು. ನಂತರ ಅಣ್ಣಾಜಿ ಕೃಷ್ಣಾರೆಡ್ಡಿ ನಿರ್ದೇಶನದಲ್ಲಿ ಪ್ರದರ್ಶನಗೊಂಡ ನಾಟಕವನ್ನು ನೂರಾರು ಪ್ರೇಕ್ಷಕರು ಆಸ್ವಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry